ಲಖನೌ: ಲಖನೌದ ಪ್ರಸಿದ್ಧ,230 ವರ್ಷ ಹಳೆಯದಾದ ಬಾರಾ ಇಮಾಂಬಾರಾಸ್ಮಾರಕ ಭಾರಿ ಮಳೆಯಿಂದ ಕುಸಿದಿದೆ.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಭಾರತೀಯ ಪುರಾತತ್ವ ಇಲಾಖೆಯ (ಎಎಸ್ಐ) ಎಂಜಿನಿಯರ್ಗಳು, ಸ್ಮಾರಕಕ್ಕೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಭಾರಿ ಮಳೆಗೆ ಸ್ಮಾರಕದ ಗೋಡೆ ಹಾಗೂ ಕಮಾನುಗಳು ಕುಸಿತವಾಗಿವೆ ಎಂದು ಪುರಾತತ್ವ ಇಲಾಖೆಯ ಲಖನೌವಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

'ಪ್ರಸಿದ್ದ ಸ್ಮಾರಕದ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರೂ ಪುರಾತತ್ವ ಇಲಾಖೆಯವರು ನಿರ್ಲಕ್ಷ್ಯ ಮಾಡಿದ್ದರು. ಕಳಪೆ ನಿರ್ವಹಣೆಯಿಂದ ಸ್ಮಾರಕ ಕುಸಿದಿದೆ'ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅವಧ್ ನವಾಬರಾಗಿದ್ದ ಅಸಫ್ ಉದ್ ದೌಲಾ ಅವರುಬಾರಾ ಇಮಾಂಬಾರಾ ಅನ್ನು 1984 ರಲ್ಲಿ ನಿರ್ಮಾಣ ಮಾಡಿದ್ದರು. ಅಭೇದ್ಯ ಕೋಟೆಯ ರೀತಿ ಇದನ್ನು ಕಟ್ಟಲಾಗಿತ್ತು. ಅಲ್ಲದೇ ಭವ್ಯ ಮಸೀದಿ ಕೂಡ ಇಲ್ಲಿ ಇತ್ತು.

ಈ ಬಾರಾಇಮಾಂಬಾರಾ ಕಟ್ಟಡವು ಕುತೂಹಲಕರ ಮತ್ತು ಆಶ್ಚರ್ಯಕರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಏಕೆಂದರೆ ಈ ಕಟ್ಟಡದ ತಾರಸಿ ತಲುಪಲು 1024 ಮಾರ್ಗಗಳಿವೆ. ಆದರೆ ಅಲ್ಲಿಗೆ ಹೋದವರು ವಾಪಸ್ ಹೊರಗೆ ಬರಲು ಕೇವಲ ಎರಡು ಮಾರ್ಗಗಳು ಮಾತ್ರ ಇವೆ.

1780 ರ ಸಮಯದಲ್ಲಿ ಅವಧ್ ಪ್ರದೇಶದಲ್ಲಿ ಭಾರಿ ಕ್ಷಾಮ ಆವರಿಸಿದ್ದರಿಂದ ಅವಧ್ ನವಾಬ ಸ್ಥಳೀಯ ಜನರಿಗೆ ಉದ್ಯೋಗ ನೀಡಲು ಈ ಕಟ್ಟಡವನ್ನು ಕಟ್ಟಿದ್ದರು ಎಂದು ಇತಿಹಾಸ ತಿಳಿಸುತ್ತದೆ.

ಬ್ರ್ಯಾಂಡ್ ಬೆಂಗಳೂರು | ನಗರಕ್ಕೆ ಮತ್ತೆ ತಿಪ್ಪಗೊಂಡನಹಳ್ಳಿ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.