ನವದೆಹಲಿ: ಭಾರತದಲ್ಲಿ 24 ಗಂಟೆಗಳ ಅಂತರದಲ್ಲಿ ಕೋವಿಡ್–19 ದೃಢಪಟ್ಟ 8,582 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 44,513ಕ್ಕೆ ಏರಿಕೆಯಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.

24 ಗಂಟೆಗಳಲ್ಲಿ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,143 ಹೆಚ್ಚಳ ಕಂಡಿದೆ. ಇದು ಒಟ್ಟು ಕೋವಿಡ್ ಪ್ರಕರಣದ ಶೇಕಡ 0.10ರಷ್ಟಿದ್ದು, ಗುಣಮುಖ ಪ್ರಮಾಣ ಶೇಕಡ 98.66ರಷ್ಟಿರುವುದಾಗಿ ಭಾನುವಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ನಿತ್ಯದ ಕೋವಿಡ್ ದೃಢ ಪ್ರಕರಣಗಳ ಪ್ರಮಾಣ ಶೇಕಡ 2.71 ಹಾಗೂ ವಾರದ ಕೋವಿಡ್ ದೃಢಪಟ್ಟ ಪ್ರಕರಣಗಳ ಪ್ರಮಾಣ ಶೇಕಡ 2.02ರಷ್ಟಿದೆ.

ಇದನ್ನೂ ಓದಿ:ಪುಲ್ವಾಮಾದಲ್ಲಿ ಎನ್ಕೌಂಟರ್; ಮೂವರು ಎಲ್ಇಟಿ ಉಗ್ರರು ಬಲಿ

ಒಟ್ಟು ಕೋವಿಡ್ ಪ್ರಕರಣಗಳು 4,32,22,017ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 5,24,761 ಮಂದಿ ಸಾವಿಗೀಡಾಗಿದ್ದಾರೆ.

ದೇಶದಾದ್ಯಂತ ಭಾನುವಾರದವರೆಗೂ 195.07 ಕೋಟಿಗೂ ಅಧಿಕ ಡೋಸ್ ಕೋವಿಡ್–19 ಲಸಿಕೆ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.