ನವದೆಹಲಿ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯೊಬ್ಬರ ಒಳ ಉಡುಪನ್ನು (ಬ್ರಾ) ತೆಗೆಸಿದ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯು ಸತ್ಯ ಶೋಧನಾ ಸಮಿತಿಯನ್ನು ರಚಿಸಿದೆ.

ಹಲವಾರು ಮಾಧ್ಯಮಗಳಲ್ಲಿ ಒಳ ಉಡುಪು ತೆಗೆಸಿದ ಘಟನೆಗೆ ಸಂಬಂಧಿಸಿ ವರದಿ ಪ್ರಕಟಗೊಂಡಿರುವುದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಎನ್ಟಿಎ ಅಡಿ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಘಟನೆ ನಡೆದ ಕೊಲ್ಲಂನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲಿದೆ. ಸಮಿತಿಯು ನೀಡುವ ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಒತ್ತಾಯಿಸಿದೆ. ಇದೊಂದು ಅವಮಾನಕಾರಿ ಘಟನೆ. ಪ್ರೌಢಾವಸ್ಥೆಯ ವಿದ್ಯಾರ್ಥಿಗಳ ಪ್ರಕೃತಿ ಸಹಜ ಲಜ್ಜೆಯನ್ನು ಹೀನಾಯವಾಗಿ ಅವಮಾನಿಸುವ ಕೃತ್ಯವಿದು ಎಂದು ಕಿಡಿಕಾರಿದ್ದಾರೆ. ಎನ್ಟಿಎ ಮುಖ್ಯಸ್ಥರಿಗೆ ಮಹಿಳಾ ಆಯೋಗದ ಎನ್ಸಿಡಬ್ಲು ಮುಖ್ಯಸ್ಥೆ ರೇಖಾ ಶರ್ಮಾ ಅವರು ಪತ್ರ ಬರೆದು, ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿ 17 ವರ್ಷದ ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ನೀಟ್ ಪರೀಕ್ಷೆಗೆ ಸಂಬಂಧಿಸಿ ಸಮವಸ್ತ್ರದ ನಿಯಮವನ್ನು ಮಗಳು ಪಾಲಿಸಿದ್ದಾಳೆ. ನಿಯಮದಲ್ಲಿ ಒಳ ಉಡುಪಿನ ಬಗ್ಗೆ ಏನನ್ನೂ ತಿಳಿಸಲಾಗಿಲ್ಲ. ಆದರೆ ಪರೀಕ್ಷೆಗೆ ಹಾಜರಾಗಲು ಒಳ ಉಡುಪು ತೆಗೆಯಬೇಕು ಎಂದು ಪರೀಕ್ಷಾ ಕೇಂದ್ರದಲ್ಲಿ ಸೂಚಿಸಿದ್ದಾರೆ ಎಂದು ದೂರಲ್ಲಿ ತಿಳಿಸಿದ್ದಾರೆ.

ನೀಟ್; ಹಿಜಾಬ್ ಧರಿಸಲು ಅನುಮತಿ ಪಡೆಯಬೇಕಿತ್ತು- ವಾಶಿಮ್ ಕಾಲೇಜು ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.