ನವದೆಹಲಿ: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಮರುನಾಮಕರಣ ಮಾಡಲು ಅಸ್ಸಾಂ ಸರ್ಕಾರ ಮುಂದಾಗಿದ್ದು, ಈ ಮೂಲಕ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ರಿಪುನ್ ಬೋರಾ ಅವರು ಶುಕ್ರವಾರ ಟೀಕಿಸಿದ್ದಾರೆ.

ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ರಿಪುನ್ ಬೋರಾ ಪತ್ರ ಬರೆದಿದ್ದಾರೆ.

‘ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯಲಿದೆ. 1985ರ ಅಸ್ಸಾಂ ಒಪ್ಪಂದದ ಮೂಲಕ ಹಲವು ವರ್ಷಗಳ ರಕ್ತಪಾತದ ಆಂದೋಲನವನ್ನು ಕೊನೆಗೊಳಿಸುವಲ್ಲಿ ರಾಜೀವ್ ಗಾಂಧಿ ಅವರ ಪಾತ್ರವನ್ನು ರಾಜ್ಯದ ಜನರು ಸದಾ ಸ್ಮರಿಸಲಿದ್ದಾರೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಮಹಾನ್ ನಾಯಕನಿಗೆ ಗೌರವಾರ್ಥವಾಗಿ ಒರಂಗ್ ರಾಷ್ಟ್ರೀಯ ಉದ್ಯಾನವನ್ನು ರಾಜೀವ್ ಗಾಂಧಿ ಒರಂಗ್ ರಾಷ್ಟ್ರೀಯ ಉದ್ಯಾನವೆಂದು ಮರುನಾಮಕರಣ ಮಾಡಲು ದಿವಂಗತ ಹಿತೇಶ್ವರ್ ಸೈಕಿಯಾ ನೇತೃತ್ವದ ಸರ್ಕಾರವು ನಿರ್ಧರಿಸಿತ್ತು. ಅಲ್ಲದೆ ಈ ಉದ್ಯಾನವನವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಬುಧವಾರ (ಸೆ.1) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜೀವ್‌ಗಾಂಧಿ ನ್ಯಾಷನಲ್ ಪಾರ್ಕ್‌ನ ಹೆಸರನ್ನು ಒರಂಗ್ ನ್ಯಾಷನಲ್ ಪಾರ್ಕ್ ಎಂದು ಬದಲಾಯಿಸಲು ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಆರೋಪಿದರು.

‘ಅಸ್ಸಾಂ ಸರ್ಕಾರದ ಈ ನಿರ್ಧಾರವು ಜನರ ಭಾವನೆಗಳನ್ನು ನೋಯಿಸಿದೆ. ಈ ರೀತಿಯ ನಿರ್ಧಾರಗಳು ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ನೆರವಾಗುವುದಿಲ್ಲ. ಈ ನಿರ್ಧಾರವನ್ನು ಬದಲಾಯಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.