ನವದೆಹಲಿ: ಕೃಷಿ ಮಸೂದೆಗಳ ಕುರಿತುಯಾವುದೇ ಗಟ್ಟಿಯಾದ ನಿರ್ಣಯಗಳಿಲ್ಲದೇ ಇಲ್ಲಿವರೆಗೂ ರೈತರು ಮತ್ತು ಸರ್ಕಾರದ ನಡುವೆ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಪಕ್ಕಕ್ಕಿಟ್ಟು, ಹೊಸದಾಗಿ ಮಾತುಕತೆಗಳನ್ನು ಆರಂಭಿಸುವಂತೆ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಿಶ್ಚಿತ ನಿರ್ಣಯಗಳಿಲ್ಲದೇ ಕೃಷಿ ಕಾಯ್ದೆಗಳ ಕುರಿತು ಸರ್ಕಾರ ಮತ್ತು ರೈತ ಸಂಘಗಳ ಪ್ರತಿನಿಧಿಗಳ ನಡುವೆ ನಡೆದ ಒಂಬತ್ತು ಸುತ್ತಿನ ಮಾತಕತೆಗಳು ವಿಫಲಗೊಂಡಿವೆ. ಬುಧವಾರ(ಇಂದು) ಹತ್ತನೇ ಸುತ್ತಿನ ಮಾತುಕತೆಯೂ ನಿಗದಿಯಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಪಕ್ಕಕ್ಕಿಟ್ಟು, ‘ಮುಂದೆ ಏನು ಮಾಡಬೇಕು, ಯಾವ ವಿಷಯಗಳನ್ನು ಕೈಬಿಡಬೇಕು‘ ಎಂಬುದನ್ನು ಇಟ್ಟುಕೊಂಡು ಹೊಸದಾಗಿ ಮಾತುಕತೆ ಆರಂಭಿಸುವಂತೆ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಹಳೆಯ ಚರ್ಚೆಗಳನ್ನು ಬದಿಗಿಟ್ಟು, ಹೊಸದಾಗಿ ಮಾತುಕತೆ ಆರಂಭಿಸುವುದನ್ನು ಸರ್ಕಾರ ನಿರಾಕರಿಸುವುದಾದರೆ, ಮುಂದಿನ ಚರ್ಚೆಗಳಲ್ಲಿ ಹೇಗೆ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯ ಎಂದು ಚಿದಂಬರಂ ಅಚ್ಚರಿಯಿಂದ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.