ಮಂಗಳೂರು: ‘ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಣಯ ಆಗಲಿದೆ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

‘ಮಂಗಳೂರಿನಲ್ಲೂ ಎನ್ಐಎ ಘಟಕ ಸ್ಥಾಪನೆಯ ಅಗತ್ಯ ಇದೆ ಎಂಬು ದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇದಕ್ಕೆ ಕೇಂದ್ರ ಸಕಾರಾತ್ಮಕ ವಾಗಿ ಸ್ಪಂದಿಸಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಪ್ರಕರಣದ ತನಿಖೆಯಲ್ಲಿ ಎನ್ಐಎ ಸೇರಿದಂತೆ ಕೇಂದ್ರದ ಪ್ರಮುಖ ತನಿಖಾ ಏಜೆನ್ಸಿಗಳು ನಮಗೆ ಸಹಕಾರ ನೀಡಿವೆ. ಔಪಚಾರಿಕವಾಗಿ ಈ ಪ್ರಕರಣ ಎನ್ಐಎಗೆ ಹಸ್ತಾಂತರ ಆಗುವವರೆಗೂ ನಮ್ಮ ಪೊಲೀಸರೇ ತನಿಖೆ ಮುಂದು ವರಿಸಲಿದ್ದಾರೆ. ನಮ್ಮವರ ತಂಡವು ಕೊಯಮತ್ತೂರು ಹಾಗೂ ಕೊಚ್ಚಿಯಲ್ಲಿ ತನಿಖಾ ಕಾರ್ಯಾಚರಣೆ ಮುಂದು ವರಿಸಿದೆ. ನೆರೆರಾಜ್ಯಗಳ ಡಿಜಿಪಿಗಳ ಜೊತೆಗೂ ಸಂಪರ್ಕದಲ್ಲಿದ್ದೇನೆ’ ಎಂದು ಡಿಜಿಪಿ ಪ್ರವಿಣ್ ಸೂದ್ ತಿಳಿಸಿದರು.

ಸರ್ಕಾರದಿಂದ ಚಿಕಿತ್ಸಾ ವೆಚ್ಚ: ‘ಸ್ಫೋಟ ದಿಂದ ಗಾಯಗೊಂಡಿರುವ ಆಟೊರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಆರಗ ತಿಳಿಸಿದರು.

‘8 ತಜ್ಞ ವೈದ್ಯರಿಂದಆರೋಪಿಗೆ ಚಿಕಿತ್ಸೆ’: ‘ಆರೋಪಿ ಶಾರಿಕ್ ಚೇತರಿಸಿಕೊಂಡರೆ ಅನೇಕ ಮಾಹಿತಿ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಎಂಟು ತಜ್ಞ ವೈದ್ಯರ ತಂಡದಿಂದ ಆತನಿಗೆ ಚಿಕಿತ್ಸೆ ಕೊಡಿಸ ಲಾಗುತ್ತಿದೆ’ ಎಂದು ಗೃಹಸಚಿವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.