ಕಲ್ಪನಾಲೋಕ ಕಸೋಲ್

ಹಿಮಾಚಲ ಪ್ರದೇಶದ ಪುಟ್ಟ ಹಳ್ಳಿ ಕಸೋಲ್; ಭೂಮಿ ಮೇಲಿನ ಸ್ವರ್ಗ. ವರ್ಷವನ್ನು ರೋಮಾಂಚನಕಾರಿಯಾಗಿ ಆರಂಭಿಸಬೇಕೆಂದು ಬಯಸುವವರಿಗೆ ಚೆಲುವು ಸ್ಫುರಿಸುವ ತಾಣ. ಹಿಮ ಹೊದ್ದ ಪರ್ವತಶ್ರೇಣಿಗಳ ನಡುವೆ ತಣ್ಣಗೆ ಹರಿವ ನದಿಯ ಕಲರವ ಕೇಳುತ್ತಾ ಪ್ರಶಾಂತವಾಗಿ ಕಾಲ ಕಳೆಯಲು ಬಯಸುವವರಿಗೆ ಕಸೋಲ್ ಕಲ್ಪನಾಲೋಕವೇ.

ಥರಗುಟ್ಟುವ ಚಳಿಯ ನಡುವೆ ನದಿಯಂಚಿನಲ್ಲಿ ಕ್ಯಾಂಪ್‌ಫೈರ್ ಹಾಕಿ ಕೂತು ಹೊಸ ಸಂವತ್ಸರವನ್ನು ಸ್ವಾಗತಿಸುವ ಸುಖವೇ ಬೇರೆ. ಪ್ರಕೃತಿಯೊಂದಿಗೆ ಮಾತ್ರವಲ್ಲ, ಹೊಸ ವರ್ಷದಲ್ಲಿ ಪಾರ್ಟಿ ಮಾಡಲು ಬಯಸುವವರಿಗೆಂದೇ ಕಸೋಲ್ ಸಡಗರದಿಂದ ತಯಾರಾಗುತ್ತದೆ. ಇದಕ್ಕಾಗೇ ಈ ಸಮಯದಲ್ಲಿ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಕಸೋಲ್ ಸುತ್ತಮುತ್ತಲಿರುವ ತೋಶ್, ಮಲಾನಾ, ಚಾಲಲ್, ರಸೋಲ್, ಗ್ರಹಣ್, ಕಲ್ಗ, ಬುದ್ಧಬನ್, ಕುಟ್ಲದಂಥ ಸ್ಥಳಗಳಿಗೂ ಭೇಟಿ ನೀಡಬಹುದು.

ಹೊಸ ಹುರುಪಿಗೆ ಹಾದಿ ಗೋವಾ

ವರ್ಷಕ್ಕೆ ಸುಂದರ ಮುನ್ನುಡಿ ಬರೆಯಬೇಕು, ಮನಸೋಇಚ್ಛೆ ಹಾಡಿ ಕುಣಿಯಬೇಕೆಂಬುದು ನಿಮ್ಮಿಷ್ಟವಾಗಿದ್ದರೆ, ‘ಗೋವಾ’ ಎಂದಿಗೂ ನಿರಾಸೆ ಮಾಡದು. ಇಂದಿಗೂ ಲಕ್ಷಾಂತರ ಜನರಿಗೆ ಗೋವಾ, ‘ಹೊಸ ವರ್ಷಾಚರಣೆಗೆ ಫೇವರೆಟ್ ಸ್ಥಳ’. ಈ ಸಮಯದಲ್ಲಿ ಜನ ಹೆಚ್ಚಿದ್ದರೂ, ಆ ವೈವಿಧ್ಯದ ಸಂಗಮವೇ ಹೊಸ ಹುರುಪು ತುಂಬುತ್ತದೆ. ಪಾರ್ಟಿ ಬಯಸುವವರಿಗೆಂದೇ ಬೀಚ್ ಸೈಡ್ ಹೋಟೆಲ್, ರೆಸಾರ್ಟ್‌ಗಳು, ಮ್ಯೂಸಿಕ್ ಅಡ್ಡಗಳು, ಕರೋಕೆ ಬಾರ್‌ಗಳು, ಹಿಪ್ಪಿ ಜಂಕ್ಷನ್‌ಗಳು, ಗಾಲಾ ಡಿನ್ನರ್, ಕೆಸಿನೊಗಳು ಮನಸ್ಸು ತಣಿಸುತ್ತವೆ.

ಪಾರ್ಟಿ ಬಯಸದವರಿಗೂ ಆಯ್ಕೆಗಳು ಕಡಿಮೆಯಿಲ್ಲ. ಪ್ರಾಚೀನ ಪೋರ್ಚುಗೀಸ್ ವಾಸ್ತುವಿನ್ಯಾಸದ ಕಟ್ಟಡಗಳು, ಸುಂದರ ಕಡಲ ಕಿನಾರೆಗಳು, ಹಿಪ್ಪಿ ಸಂಸ್ಕೃತಿ ಬಿಂಬಿಸುವ ಜನನಿಬಿಡ ದಾರಿಗಳು, ಫ್ಲೀ ಮಾರ್ಕೆಟ್‌ಗಳು ಕಣ್ಣು ತುಂಬಬಲ್ಲವು. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸುವವರಿಗೆ ದಕ್ಷಿಣ ಗೋವಾ ಹೇಳಿ ಮಾಡಿಸಿದ್ದು. ಬೆಟ್ಟಗುಡ್ಡಗಳ ನಡುವೆ, ವಿಶ್ರಾಂತ ಸಮುದ್ರಗಳ ಸಾಮೀಪ್ಯ ಸುಂದರ ಅನುಭವ ನೀಡಬಲ್ಲದು.

ವಿಶೇಷ ಅನುಭೂತಿಯ ಕಾಜಾ

ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿರುವ, ಹಿಮಾಚಲದ ಸ್ಪಿಟಿ ಕಣಿವೆಯ ಕಾಜಾ ನಗರ, ಸೌಂದರ್ಯವನ್ನೇ ಮೈವೆತ್ತ ಜಾಗ. ಭಾರತದಲ್ಲಿ ಅತ್ಯುತ್ತಮ ಹೊಸ ವರ್ಷಾಚರಣೆಯ ತಾಣವೆಂದು ಹೆಸರು ಪಡೆದಿದ್ದು, ವಿಶೇಷ ಅನುಭೂತಿ ನೀಡಬಲ್ಲದು.

ಮೊನಾಸ್ಟರಿಗಳು, ಹಳೆ ಕೋಟೆಗಳು, ಹಿಮಾಚ್ಛಾದಿತ ಪರ್ವತಗಳು, ಝರಿ ತೊರೆಗಳು, ಆಕಾಶವನ್ನು ಪ್ರತಿಬಿಂಬಿಸುವ ಸರೋವರಗಳು... ಬೇಸರ ಕಳೆದು ಹೊಸ ಉತ್ಸಾಹವನ್ನು ತುಂಬಬಲ್ಲ ದೃಶ್ಯಗಳು ಇಲ್ಲಿ ಅಸಂಖ್ಯ.

ಸಾಹಸಮಯ ಯಾನ ಬಯಸುವವರು ಹಿಕ್ಕಿಂನಲ್ಲಿನ ವಿಶ್ವದ ಅತಿ ಎತ್ತರದ ಅಂಚೆ ಕಚೇರಿಗೆ ಭೇಟಿ ನಿಡಬಹುದು. ಪಿನ್ ನ್ಯಾಷನಲ್ ವ್ಯಾಲಿಗೆ ಸಫಾರಿ ಕೈಗೊಳ್ಳಬಹುದು.

ಭಿನ್ನ ಭೂದೃಶ್ಯಾವಳಿಯ ವಯನಾಡು

ಹಸುರು ತುಂಬಿದ ಬೆಟ್ಟ ಗುಡ್ಡಗಳ, ದಟ್ಟ ಕಾಡುಗಳ ನಡುವಿನ ಕೇರಳದ ವಯನಾಡು ಹೊಸ ವರ್ಷದ ಸಮಯದಲ್ಲಿ ಇನ್ನಷ್ಟು ಚೆಲುವು ತುಂಬಿಕೊಂಡಿರುತ್ತದೆ. ಚಳಿಗಾಲದ ಈ ಸಮಯದಲ್ಲಿ ಮಂಜು ಆವರಿಸಿದ ಬೆಟ್ಟಗುಡ್ಡಗಳ ದೃಶ್ಯಾವಳಿಗಳು ಮನಸ್ಸಿಗೆ ಹೊಸತನ ತುಂಬಬಲ್ಲವು. ಸಮುದ್ರ ಮಟ್ಟದಿಂದ 2100 ಮೀಟರ್ ಎತ್ತರದಲ್ಲಿದ್ದು, ಭಿನ್ನ ಭೂದೃಶ್ಯಾವಳಿಗಳನ್ನು ಹೊಂದಿರುವ ಅಪರೂಪದ, ಆಕರ್ಷಣೀಯ ಸ್ಥಳ. ಜಲಧಾರೆಗಳು, ಗುಹೆಗಳು, ಘಮ್ಮೆನ್ನುವ ತೋಟಗಳನ್ನು ನೋಡುತ್ತಾ ಹೊಸ ವರ್ಷ ಆಚರಿಸಬಹುದು. ಝಿಪ್ಲಿಂಗ್ ಕೂಡ ಹೊಸ ಅನುಭವ ನೀಡಬಹುದು.

ಪ್ರಕೃತಿಪ್ರಿಯರಿಗೆಂದೇ ಹೊಸ ವರ್ಷಕ್ಕೆ ಟ್ರೀ ಹೌಸ್, ಬೋಟ್‌ಹೌಸ್‌ಗಳೂ ಅಣಿಗೊಳ್ಳುತ್ತವೆ. ಮರದ ಮನೆಯಲ್ಲಿ ನಿಸರ್ಗದ ಚೆಲುವಿನೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸಬಹುದು.

ಉತ್ಸಾಹ ತುಂಬುವ ಶಿಲ್ಲಾಂಗ್

ಮನಸ್ಸಿನ ಬೇಸರವನ್ನೆಲ್ಲಾ ಮರೆಸಿ ನವ ಚೈತನ್ಯ ತುಂಬುವ ಶಕ್ತಿ ಶಿಲ್ಲಾಂಗ್‌ನಲ್ಲಿದೆ. ಈಶಾನ್ಯ ರಾಜ್ಯ ಮೇಘಾಲಯದ ರಾಜಧಾನಿ ಶಿಲ್ಲಾಂಗ್, ನದಿ– ಸರೋವರ, ಪುಟ್ಟ ಪುಟ್ಟ ಜಲಧಾರೆಗಳನ್ನೊಳಗೊಂಡ ದಟ್ಟ ಕಾಡಿನ ಸುಂದರ ನೋಟದೊಂದಿಗೆ ಕಫೆ, ಕ್ಲಬ್‌ಗಳನ್ನೊಳಗೊಂಡ ಆಧುನಿಕ ಮೋಹಕ್ಕೂ ತಕ್ಕ ನಗರ. ಇದಕ್ಕೇ ಶಿಲ್ಲಾಂಗ್‌ಗೆ ‘ಪೆಪ್ಪಿ ಸಿಟಿ’ ಎಂದು ಪ್ರೀತಿಯಿಂದ ಕರೆಯುವುದು.

ಪ್ರಕೃತಿಯ ತೋಳಿನಲ್ಲಿ ಕಾಲ ಕಳೆಯಲು ಬಯಸುವವರಿಗೂ, ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಬಯಸುವವರಿಗೂ ಹೊಸ ವರ್ಷದಲ್ಲಿ ಶಿಲ್ಲಾಂಗ್ ಬಾಗಿಲು ತೆರೆದು ಸ್ವಾಗತಿಸುತ್ತದೆ. ಇಲ್ಲಿಯೇ ಎಲಿಫಂಟ್ ಫಾಲ್ಸ್, ಶಿಲಾಂಗ್ ಪೀಕ್, ಡಾನ್‌ಬಾಸ್ಕೊ ಮ್ಯೂಸಿಯಂ, ಲೇಡಿ ಹೈದರಿ ಪಾರ್ಕ್ ನೋಡಿ ಇನ್ನಷ್ಟು ಖುಷಿಗೊಳ್ಳಬಹುದು.

ಚಿನ್ನದ ನಗರದಲ್ಲಿ...

ಸುಂದರ ಕಡಲ ತೀರಗಳಲ್ಲಿ, ಹಸಿರು ಬೆಟ್ಟ ಗುಡ್ಡಗಳ ನಡುವೆ, ಹಿಮ ಪರ್ವತಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಇಷ್ಟಪಡುವವರು ಒಂದೆಡೆಯಾದರೆ, ಮರಳ ರಾಶಿಯ ನಡುವೆ ಹೊಸ ಯುಗಕ್ಕೆ ಕಾಲಿಡಲು ಬಯಸುವವರು ಹಲವರು. ಇದಕ್ಕೆ ಹೇಳಿಮಾಡಿಸಿದ ತಾಣ ರಾಜಸ್ಥಾನದ ಜೈಸಲ್ಮೇರ್. ಜೈಸಲ್ಮೇರ್ ಕೂಡ ಹೊಸ ವರ್ಷಾಚರಣೆಯ ಸುಂದರ ತಾಣವೆಂಬ ಖ್ಯಾತಿ ಪಡೆದ ಊರು.

ಮರಳ ಇಳಿಜಾರು, ದಿಬ್ಬಗಳ ನಡುವೆ ಒಂಟೆ ಪಯಣ ಮಾಡುತ್ತಾ ರಾಜಸ್ಥಾನದ ಜನಪದ ನೃತ್ಯ, ಸಂಗೀತವನ್ನು ಮರಳುಗಾಡಿನ ಮಧ್ಯೆ ಕೇಳುತ್ತಾ ಹೊಸತನ ಅನುಭವಿಸುವುದು ಕೂಡ ರೋಚಕವೇ. ಇದರೊಂದಿಗೆ ಅರಮನೆ, ಪ್ರಾಚೀನ ಕೋಟೆಗಳನ್ನು ಸುತ್ತುತ್ತಾ ಭಾರತದ ಚಿನ್ನದ ನಗರಿ ಜೈಸಲ್ಮೇರ್‌ನಲ್ಲಿ ಕಾಲ ಕಳೆದು ಶ್ರೀಮಂತ ಸಂಸ್ಕೃತಿ, ಇತಿಹಾಸವನ್ನು ಅರಿಯಬಹುದು. ಮರಳುಗಾಡಿನ ನಡುವೆ ಕ್ಯಾಂಪಿಂಗ್, ಸೂರ್ಯಾಸ್ತದ ವೀಕ್ಷಣೆ ಭಿನ್ನ ಅನುಭವವನ್ನೇ ನೀಡಬಹುದು.

ಫ್ರೆಂಚ್ ಕುರುಹುಗಳ ಪುದುಚೇರಿ

‘ಭಾರತದ ಪುಟ್ಟ ಫ್ರಾನ್ಸ್’ ಎಂದೇ ಕರೆಸಿಕೊಂಡಿರುವ ಪುದುಚೇರಿ, ಹೊಸ ವರ್ಷ ಸಮೀಪಿಸುತ್ತಿದ್ದಂತೆ ಹೊಸ ಮೆರುಗು ತುಂಬಿಕೊಳ್ಳುತ್ತದೆ. ಬಣ್ಣ ಬಣ್ಣದ ಲೈಟಿಂಗ್‌ಗಳಿಂದ ಮಿಂದೇಳುವ ನಗರದಲ್ಲಿ ನವ ಸಂವತ್ಸರದ ಖುಷಿಯೂ ಪ್ರತಿಫಲಿಸುತ್ತದೆ. ಈ ಕಾರಣಕ್ಕೇ ಹೊಸ ವರ್ಷಾಚರಣೆಗೆ ಅತ್ಯುತ್ತಮ ಸ್ಥಳ ಎಂದು ಪುದುಚೇರಿ ಹೆಸರು ಗಳಿಸಿಕೊಂಡಿದೆ.

ಪ್ಯಾರಡೈಸ್ ಬೀಚ್, ಆರೋ ಬೀಚ್‌ಗಳಂಥ ಶುದ್ಧ ಸಾಗರ ತಟಗಳೊಂದಿಗೆ ಫ್ರೆಂಚ್ ಸಂಸ್ಕೃತಿಯ ಕುರುಹುಗಳನ್ನೂ ಅಲ್ಲಲ್ಲಿ ಕಾಣಬಹುದು. ಫ್ರೆಂಚ್ ಶೈಲಿಯ ಕಟ್ಟಡಗಳು, ಕೆಫೆಗಳು, ಥರಾವರಿ ಸ್ಥಳೀಯ ಖಾದ್ಯಗಳು... ಎಲ್ಲವನ್ನೂ ಮಿಶ್ರವಾಗಿಸಿಕೊಂಡ ಸ್ಥಳದಲ್ಲಿ ನವ ವರ್ಷಾಚರಣೆಯೂ ವಿಶೇಷವೆನಿಸಬಹುದು.

ಹಸಿರಿನ ಸಿರಿಯಲ್ಲಿ ಹೊಸತನ

ಹಸಿರು ಮೈದುಂಬಿಕೊಂಡ ಕಾಡು, ಟೀ–ಕಾಫಿ ತೋಟಗಳ ಘಮಲಿನ ನಡುವೆ ಸಾಗುತ್ತಲೇ ಬೆಟ್ಟ ಗುಡ್ಡಗಳ ಚೆಲುವನ್ನು ಕಣ್ತುಂಬಿಕೊಳ್ಳುವ, ಮಂಜಿನಾಟವನ್ನು ಕಾಣಿಸುವ, ಭಿನ್ನ ಸಂಸ್ಕೃತಿಯೊಂದನ್ನು ಪರಿಚಯಿಸುವ ಮಡಿಕೇರಿ, ಹೊಸ ವರ್ಷಾಚರಣೆಯ ಪ್ರಸಿದ್ಧ ತಾಣದ ಪಟ್ಟಿಯಲ್ಲಿ ಗುರುತು ಮೂಡಿಸಿಕೊಂಡಿದೆ.

ಹೊಸ ವರ್ಷವನ್ನು ನಿಸರ್ಗದ ಸಾಮೀಪ್ಯದಲ್ಲಿ ಕಳೆಯಬಯಸುವವರಿಗೆ ಮಡಿಕೇರಿಯ ವಾತಾವರಣ ಬಲು ಹಿತ. ಇದರೊಂದಿಗೆ ಹಾಡಿ ನಲಿದು ಕುಣಿಯಲು ಇಷ್ಟಪಡುವವರಿಗೆಂದೇ ಇಲ್ಲಿ ರೆಸಾರ್ಟ್‌ಗಳು, ಹೋಂ ಸ್ಟೇಗಳು ವಿಶೇಷವಾಗಿ ಅಣಿಯಾಗಿರುತ್ತವೆ. ಮೈಮನ ತಣಿಸುವ ಸಾಕಷ್ಟು ಸುಂದರ ಸ್ಥಳಗಳೂ ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.