ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಉಂಡವಲ್ಲಿ ಗುಹೆಗಳನ್ನು 4-5 ನೇ ಶತಮಾನಗಳಲ್ಲಿ ಏಕಶಿಲೆಯಿಂದ ನಿರ್ಮಿಸಲಾಗಿವೆ. ಒಡಿಸ್ಸಾದ ಉದಯಗಿರಿ ಮತ್ತು ಖಂಡಗಿರಿಯ ಗುಹೆಗಳ ವಾಸ್ತುಶಿಲ್ಪವನ್ನು ಹೋಲುವ ಈ ಗುಹೆಗಳು ಅನಂತ ಪದ್ಮನಾಭನಿಗೆ ಸಮರ್ಪಿತವಾಗಿವೆ. ಈ ಗುಹೆಗಳಲ್ಲಿ ಅನೇಕ ವೈಷ್ಣವ ದೇವರುಗಳ ಶಿಲ್ಪಗಳನ್ನು ನೋಡಬಹುದು.

ಗುಂಟೂರಿನಿಂದ ಸುಮಾರು 12 ಕಿಲೊಮೀಟರ್ ಹಾಗೂ ವಿಜಯವಾಡದಿಂದ 6 ಕಿಲೊಮೀಟರ್ ದೂರದಲ್ಲಿರುವ ಉಂಡವಲ್ಲಿ ಸಮೀಪವಿರುವ ಬೆಟ್ಟದ ಮೇಲೆ ಪ್ರತ್ಯೇಕ ಸ್ಥಳಗಳಲ್ಲಿ ಕೆತ್ತಲಾಗಿರುವ ಎರಡು ಗುಹೆಗಳಿವೆ. ಇವೆರಡೂ ಗುಹೆಗಳನ್ನು ಮರಳುಗಲ್ಲನ್ನು ಕೊರೆದು ನಿರ್ಮಿಸಲಾಗಿವೆ. ನಾಲ್ಕು ಅಂತಸ್ತು ಹೊಂದಿರುವ ಮುಖ್ಯ ಗುಹೆಗಳ ಸಮುಚ್ಚಯವು ವಿಶೇಷವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪೂರ್ವಾ ಭಿಮುಖವಾಗಿರುವ ಗುಹೆಗಳು 29 ಮೀಟರ್ ಅಗಲ ಮತ್ತು 16 ಮೀಟರ್ ಎತ್ತರವಿದ್ದು, ನೆಲ ಮಹಡಿಯು ಎಂಟು ಕಂಬಗಳಿಂದ ನಿರ್ಮಿತವಾಗಿದ್ದು, ಏಳು ಪ್ರವೇಶದ್ವಾರಗಳನ್ನು ಹೊಂದಿದೆ. ಮೂಲತಃ ತ್ರಿಮೂರ್ತಿಗಳಿಗೆ ಸಮರ್ಪಿತವಾಗಿರುವ ನೆಲ ಮಹಡಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಗುಡಿಗಳಿವೆ. ಗಣೇಶ, ಉಗ್ರನರಸಿಂಹ ಹಾಗೂ ಆಂಜನೇಯನಮೂರ್ತಿಗಳನ್ನೂ ಕಾಣಬಹುದು. ಏಳು ಮತ್ತು ಎಂಟನೇ ಶತಮಾನದಲ್ಲಿ ರಚಿಸಲಾದ ಪೌರಾಣಿಕ ಕಥಾನಕಗಳ ಉಬ್ಬುಶಿಲ್ಪಗಳು ಮೊದಲ ಮಹಡಿಯ ಗೋಡೆಗಳಲ್ಲಿವೆ.

ಎರಡನೆಯ ಅಂತಸ್ತಿನಲ್ಲಿ ಏಳು ಹೆಡೆಗಳ ನಾಗರಾಜನಿರುವ 20 ಅಡಿ ಉದ್ದದ ಶಯನ ಭಂಗಿಯಲ್ಲಿ ರುವ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಏಕಶಿಲಾ ಪ್ರತಿಮೆಯಿದೆ. ಈ ಪ್ರತಿಮೆಯು ಅನಂತ ಪದ್ಮನಾಭನೆಂದು ಹೇಳುತ್ತಾರಾದರೂ, ವಿಷ್ಣುವಿನ ಬಳಿ ಇತರೆಡೆ ಇರುವಂತೆ ಶ್ರೀದೇವಿ ಮತ್ತು ಭೂದೇವಿಯರ ಪ್ರತಿಮೆಗಳು ಇಲ್ಲದಿರುವುದರಿಂದ, ಜೈನ ತೀರ್ಥಂಕರನ ವಿಗ್ರಹವಾಗಿರಬಹುದೆಂದು ಕೆಲವರು ಹೇಳುತ್ತಾರೆ. ಈ ವಿಗ್ರಹದ ಪಾದದ ಬಳಿ ಕೆಲವು ಮೂರ್ತಿಗಳ ಕೆತ್ತನೆಗಳಿದ್ದು, ಮೂರ್ತಿಗಳ ವಿವರಗಳು ಲಭ್ಯವಿಲ್ಲ.

ಮೂರನೆಯ ಮಹಡಿಯ ಮುಂಭಾಗದಲ್ಲಿ ಕುಳಿತ ಭಂಗಿಯಲ್ಲಿರುವ ಆಳ್ವಾರರ ಶಿಲ್ಪಗಳ ಜೊತೆಗೆ ಆನೆ ಮತ್ತು ಸಿಂಹಗಳ ಶಿಲ್ಪಗಳಿವೆ.

ಏಕಶಿಲೆಯನ್ನು ಕೊರೆದು ನಿರ್ಮಿಸಿರುವ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವ ಉಂಡವಲ್ಲಿ ಗುಹೆಗಳಿರುವ ಪ್ರದೇಶವು ವಿಷ್ಣುಕುಂಡಿನ ರಾಜರ ಆಳ್ವಿಕೆಯಲ್ಲಿ ಇತ್ತು. ಬೌದ್ಧ ಧರ್ಮದ ಅನುಯಾಯಿಗಳಾಗಿದ್ದುದರಿಂದ ಈ ಗುಹೆಗಳಲ್ಲಿ ಮೊದಲು ಬೌದ್ಧ ದೇವಾಲಯಗಳನ್ನು ನಿರ್ಮಿಸಲಾಯಿತು ಹಾಗೂ ಈ ಗುಹೆಗಳನ್ನು ಬೌದ್ಧ ಸನ್ಯಾಸಿಗಳು ವಿಶ್ರಾಂತಿ ಗುಹೆಗಳನ್ನಾಗಿ ಬಳಸುತ್ತಿದ್ದರು. ನಂತರದ ವರ್ಷಗಳಲ್ಲಿ ಕೊಂಡವೀಡು ರೆಡ್ಡಿಗಳಲ್ಲಿ ಒಬ್ಬರಾದ ಮಾಧವ ರೆಡ್ಡಿ ಅಧೀನದಲ್ಲಿದ್ದ ಈ ಪ್ರದೇಶ ಮತ್ತು ಗುಹೆಗಳಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸಲು ಉಡುಗೊರೆಯಾಗಿ ನೀಡಿದ್ದನು ಎಂದು ಸ್ಥಳೀಯವಾಗಿ ಲಭ್ಯವಿರುವ ದಾಖಲೆಗಳಿಂದ ತಿಳಿದು ಬರುತ್ತದೆ.

ಮುಖ್ಯ ಗುಹಾ ಸಮುಚ್ಚಯದಿಂದ ಸುಮಾರು 500 ಮೀಟರ್ ದೂರದಲ್ಲಿ ಮತ್ತೊಂದು ಗುಹೆಯಿದ್ದು, ಮೂರು ದ್ವಾರಗಳನ್ನು ಹೊಂದಿದೆ. ಈ ಗುಹೆಯ ಎರಡೂ ಪಾರ್ಶ್ವಗಳಲ್ಲಿ ಗೂಡಿನಂತಹ ರಚನೆಗಳಿವೆ. ಎಲ್ಲೂ ಸಹ ದೇವರ ವಿಗ್ರಹಗಳಿಲ್ಲ. ಗುಹೆಗೆ ಹೋಗುವ ದಾರಿಯಲ್ಲಿ ಆಳೆತ್ತರದ ವೀರಾಂಜನೇಯನ ಉಬ್ಬುಶಿಲ್ಪವಿದೆ.

ಆ ಕಾಲದಲ್ಲಿ ಮರಳುಗಲ್ಲನ್ನು ಕತ್ತರಿಸಿ ನಿರ್ಮಿಸಲಾದ ಗುಹೆಗಳು ಮತ್ತು ವಿಗ್ರಹಗಳು ಶಿಲ್ಪಗಳ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಬೆಟ್ಟದಲ್ಲಿರುವ ಗುಹೆಗಳು ಹಚ್ಚ ಹಸುರಿನ ಗಿಡ ಮರಗಳಿಂದ ಆವೃತ್ತವಾಗಿದ್ದು, ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಮುಖ್ಯ ಗುಹೆಗಳ ಮುಂಭಾಗದ ಪ್ರದೇಶದಲ್ಲಿರುವ ಹಸಿರುಹುಲ್ಲಿನ ಹಾಸಿನ ಮೇಲೆ ಪ್ರವಾಸಿಗರು ವಿಶ್ರಮಿಸಬಹುದು. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಈ ರಾಷ್ಟ್ರೀಯ ಸ್ಮಾರಕವು ಭಾರತೀಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.