ನವದೆಹಲಿ: ಶಾಪೊರ್ಜಿ ಪಲ್ಲೋಂಜಿ ರಿಯಲ್ ಎಸ್ಟೇಟ್ ಕಂಪನಿಯು ಬೆಂಗಳೂರಿನಲ್ಲಿ 440 ಫ್ಲ್ಯಾಟ್ಗಳು ಇರುವ ಐಷಾರಾಮಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಅಂದಾಜು ₹ 300 ಕೋಟಿ ಹೂಡಿಕೆ ಮಾಡಲಿದೆ.

ಬೆಂಗಳೂರಿನ ಬಿನ್ನಿಪೇಟೆಯಲ್ಲಿ 46 ಎಕರೆ ಜಾಗದಲ್ಲಿ ಐಷಾರಾಮಿ ವಸತಿ ಯೋಜನೆ ‘ಪಾರ್ಕ್ವೆಸ್ಟ್’ನಲ್ಲಿ ಹೊಸ ಹಂತಕ್ಕೆ ಚಾಲನೆ ನೀಡಿದ್ದು ಅದರಲ್ಲಿ 462.10 ಚದರ ಅಡಿಯಿಂದ 1,185 ಚದರ ಅಡಿಯವರೆಗಿನ 440 ಐಷಾರಾಮಿ ಫ್ಲ್ಯಾಟ್ಗಳು ಇರುವ ಅಪಾರ್ಟ್ಮೆಂಟ್ ನಿರ್ಮಾಣವಾಗಲಿದೆ. ಬೆಲೆಯು ₹ 72 ಲಕ್ಷದಿಂದ ₹ 2.06 ಕೋಟಿಯವರೆಗೆ ಇರಲಿದೆ.

ಈಗಾಗಲೆ ಮೂರು ಹಂತಗಳಲ್ಲಿ 1,900 ಫ್ಲ್ಯಾಟ್ಗಳ ನಿರ್ಮಾಣ ಪೂರ್ಣಗೊಂಡಿದ್ದು ಬಹುತೇಕ ಫ್ಲ್ಯಾಟ್ಗಳು ಮಾರಾಟವಾಗಿವೆ ಎಂದು ತಿಳಿಸಿದೆ.

ವಿಶಾಲವಾದ ಐಷಾರಾಮಿ ಮನೆಗಳಿಗೆ ಬೇಡಿಕೆಕಳೆದ ಕೆಲವು ತಿಂಗಳುಗಳಿಂದ ಸ್ಥಿರವಾಗಿದೆ. ಕೋವಿಡ್ ನಂತರ ಬೆಂಗಳೂರು ಮಾರುಕಟ್ಟೆಯಲ್ಲಿ ಗ್ರಾಹಕರ ವರ್ತನೆಯಲ್ಲಿ ಬದಲಾವಣೆ ಆಗಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಕಂಪನಿಯ ಸಿಇಒ ವೆಂಕಟೇಶ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.