ಭಾರತದ ಮೊದಲ ಆರೋಗ್ಯ ಸಚಿವೆ ಅಮೃತಾ ಕೌರ್ ಅವರದ್ದು ಎಂದು ಹೇಳಲಾದ ಎರಡು ಚಿತ್ರಗಳು ಫೇಸ್ಬುಕ್ನಲ್ಲಿ ಕೆಲವು ದಿನಗಳಿಂದ ವೈರಲ್ ಆಗಿವೆ. ಆದರೆ 2020ರ ಅಕ್ಟೋಬರ್ನಿಂದಲೂ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿವೆ. ‘ದೇಶದ ಅತಿದೊಡ್ಡ ಏಮ್ಸ್ ಆಸ್ಪತ್ರೆಯು ಕೌರ್ ಅವರ ಕೊಡುಗೆ. ಈಗಿನ ಯಾವ ಸಚಿವರ ಜೊತೆಗೂ ಅವರನ್ನು ಹೋಲಿಸಲಾಗದು’ ಎಂಬ ಒಕ್ಕಣೆ ಇರುವ ಪೋಸ್ಟರ್ಗಳು ಹರಿದಾಡುತ್ತಿವೆ.

ಈ ಚಿತ್ರಗಳನ್ನು ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಗಳು ಪರಿಶೀಲಿಸಿವೆ. ಒಂದು ಚಿತ್ರದಲ್ಲಿರುವುದು ಬರಹಗಾರ್ತಿ ಹಾಗೂ ಲೇಡಿಸ್ ಕಂಪಾರ್ಟ್ಮೆಟ್ ಸಂಸ್ಥಾಪಕಿ ಅವಂತಿಕಾ ಮೆಹ್ತಾ. ಫೋಟೋಶೂಟ್ಗಾಗಿ ಸೆರೆಹಿಡಿದ ಚಿತ್ರದಲ್ಲಿ ಅವರು ಕೌರ್ ತರಹ ಕಾಣಿಸಿದ್ದಾರೆ. ಸ್ವತಃ ಅವಂತಿಕಾ ಇದನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಎರಡನೇ ಚಿತ್ರದಲ್ಲಿರುವವರು ಕಪುರ್ತಲಾದ ಮಹಾರಾಜ ಜಗ್ಜೀತ್ ಸಿಂಗ್ ಅವರ ಪುತ್ರಿ ರಾಜಕುಮಾರಿ ಅಮೃತ್ ಕೌರ್.

ಎರಡೂ ಚಿತ್ರಗಳಲ್ಲಿರುವುದು ಮೊದಲ ಆರೋಗ್ಯ ಸಚಿವೆ ಅಮೃತಾ ಕೌರ್ ಅಲ್ಲ ಎಂಬುದು ಸ್ಪಷ್ಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.