‘10 ವರ್ಷಗಳ ನಂತರ ಮೀಸಲಾತಿಯನ್ನು ಕೊನೆಗೊಳಿಸಬೇಕು’ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು 1956ರಲ್ಲಿ ಹೇಳಿದ್ದರು. ಆದರೆ, ಅಧಿಕಾರದಲ್ಲಿ ಇದ್ದ ಪಕ್ಷವು ಮೀಸಲಾತಿಯನ್ನು ಮುಂದುವರಿಸಿತು’ ಎಂಬ ಬರಹ ಇರುವ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್ ಅವರು2018ರಲ್ಲಿ ಜಾರ್ಖಂಡ್‌ನಲ್ಲಿ ನಡೆದಿದ್ದ ಲೋಕ ಮಂಥನ ಕಾರ್ಯಕ್ರಮದಲ್ಲೂ ಇದೇ ಮಾತು ಹೇಳಿದ್ದರು. ದೇಶದ 75ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ಮತ್ತೆ ಇಂತಹ ಪೋಸ್ಟರ್‌ಗಳು ಮುನ್ನೆಲೆಗೆ ಬಂದಿವೆ.

‘10 ವರ್ಷಗಳ ನಂತರ ಮೀಸಲಾತಿಯನ್ನು ಕೊನೆಗೊಳಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಿಯೂ ಹೇಳಿಲ್ಲ’ ಎಂದು ಆಲ್ಟ್ ನ್ಯೂಸ್, ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ‘1932ರ ಪೂನಾ ಒಪ್ಪಂದದ ಸಂದರ್ಭದಲ್ಲಿ, ‘10 ವರ್ಷದ ನಂತರ ರಾಜಕೀಯ ಕ್ಷೇತ್ರದಲ್ಲಿನ ಮೀಸಲಾತಿಯನ್ನು ಪರಿಷ್ಕರಿಸಬೇಕು’ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಮೀಸಲಾತಿಯನ್ನು ರದ್ದುಪಡಿಸಬೇಕು ಅಥವಾ ಕೊನೆಗೊಳಿಸಬೇಕು ಎಂದು ಅವರು ಹೇಳಿರಲಿಲ್ಲ.

ಶಿಕ್ಷಣ, ಉದ್ಯೋಗ ಮತ್ತು ಬಡ್ತಿಯಲ್ಲಿನ ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಅಂಬೇಡ್ಕರ್ ಅವರು ಎಲ್ಲಿಯೂ ಹೇಳಿಲ್ಲ. ಮೀಸಲಾತಿ ಕುರಿತಂತೆ ಅಂಬೇಡ್ಕರ್ ಅವರು ಹೇಳಿದ್ದಾರೆ ಎನ್ನಲಾದ ಸುಳ್ಳುಸುದ್ದಿಗಳ ಬಗ್ಗೆ, ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನ ಸಹಾಯಕ ಪ್ರೊಫೆಸರ್ ಅನುರಾಗ್ ಭಾಸ್ಕರ್ ಅವರು ಅಧ್ಯಯನ ವರದಿ ಪ್ರಕಟಿಸಿದ್ದಾರೆ. ಮೀಸಲಾತಿ ಬಗ್ಗೆ ಅಂಬೇಡ್ಕರ್ ಅವರು ಈ ರೀತಿ ಎಲ್ಲಿಯೂ ಹೇಳಿಲ್ಲ ಎಂದು ಅನುರಾಗ್ ಭಾಸ್ಕರ್ ಹೇಳಿದ್ದಾರೆ ಎಂದು ಈ ಫ್ಯಾಕ್ಟ್‌ಚೆಕ್‌ಗಳಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.