ಬೆಂಗಳೂರು: ಮೊಬೈಲ್ನಲ್ಲಿಮಾತನಾಡುತ್ತಾ ರಸ್ತೆಯಲ್ಲಿ ಸಾಗುತ್ತಿರುವ ಮಹಿಳೆ. ಹಿಂದಿನಿಂದ ವ್ಯಕ್ತಿಯೊಬ್ಬರು ಮಗುವನ್ನು ಎತ್ತಿಕೊಂಡು ಮೇಡಂ, ದಯವಿಟ್ಟು ನಿಲ್ಲಿ. ಯಾರಾದರೂ ಆಕೆಯನ್ನು ಕರೆಯಿರಿ ಎಂದು ಕೂಗುತ್ತಾ ಬಂದು ಮಗುವನ್ನು ಆಕೆಯ ಕೈಗೆ ನೀಡುತ್ತಾರೆ. ಮೊಬೈಲ್ನಲ್ಲಿ ಮಾತನಾಡುತ್ತಾ ಮಗುವನ್ನೇ ಮರೆತ ಮಹಿಳೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಜೀನ್ಯೂಸ್, ನವ್ಭಾರತ್ ಟೈಮ್ಸ್, ಪತ್ರಿಕಾ ಮತ್ತು ಪಂಜಾಬ್ ಕೇಸರಿ ಸುದ್ದಿ ಸಂಸ್ಥೆಗಳು ಇದೇ ವಿಡಿಯೊವನ್ನು ಪ್ರಕಟಿಸಿದ್ದವು.

ಎಬಿಪಿ ನ್ಯೂಸ್ ತಮ್ಮ ವೈರಲ್ ಖಬರ್ ಎಂಬ ಕಾರ್ಯಕ್ರಮದಲ್ಲಿ ಈ ವಿಡಿಯೊ ಪ್ರಸಾರ ಮಾಡಿತ್ತು.

ABP News broadcasts a video shoot as a real event from Alt News on Vimeo.

ಅಮಿತ್ ಎಂಬ ಹೆಸರಿನ ನೆಟ್ಟಿಗರೊಬ್ಬರು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟಿಸಿದ್ದಾರೆ ಎಂದು ಈ ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

ಮೊಬೈಲ್ನಿಂದಾಗಿ ತನ್ನ ಮಗುವನ್ನೇ ಮರೆತಳು (ಮೊಬೈಲ್ ಕೆ ಚಕ್ಕರ್ ಮೇ ಅಪ್ನಿ ಬಚ್ಚೇ ಕೋ ಹೀ ಬೂಲ್ ಗಯೀ) ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. Sonepat Breaking News ಎಂಬ ಫೇಸ್ಬುಕ್ ಪುಟದಲ್ಲಿಈ ವಿಡಿಯೊ ಅಪ್ಲೋಡ್ಆಗಿದ್ದು 1225 ಮಂದಿ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ಫೇಸ್ಬುಕ್ನಲ್ಲಿ ಮಾತ್ರ ಅಲ್ಲ ಟ್ವಿಟರ್ , ಯೂಟ್ಯೂಬ್ನಲ್ಲಿಯೂ ಇದೇ ವಿಡಿಯೊ ಹರಿದಾಡಿದೆ.

ಫ್ಯಾಕ್ಟ್ಚೆಕ್
ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಡಿಯೊದ ಅಸಲಿಯತ್ತು ತಿಳಿಯುತ್ತದೆ. ವಿಡಿಯೊದ 0:07 ನಿಮಿಷದಲ್ಲಿ ವ್ಯಕ್ತಿಯೊಬ್ಬರು ಮಗುವನ್ನುಎತ್ತಿಕೊಂಡು ಬರುತ್ತಿರುವಾಗ ಅಕ್ಕ ಪಕ್ಕ ಜನರ ಗುಂಪು ಕಾಣಿಸುತ್ತದೆ. ಅಲ್ಲಿ ಏನು ನಡೆಯುತ್ತಿದೆ ಎಂದು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದು ಇದು ಶೂಟಿಂಗ್ ಎಂಬುದು ತಿಳಿಯುತ್ತದೆ. ಇದಕ್ಕೆ ಪೂರಕವೆಂಬಂತೆಟ್ವೀಟಿಗ ಆಸಿಫ್ ತೊಡಿಯಾ ಎಂಬವರು ಶೂಟಿಂಗ್ನ ಇನ್ನೊಂದು ದೃಶ್ಯವನ್ನು ಟ್ವೀಟಿಸಿದ್ದಾರೆ.

@Amit_smiling ಎಂಬವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಹೇತಲ್ ಓಜಾ ಎಂಬವರು ಇದು ಸಿನಿಮಾವೊಂದರ ಶೂಟಿಂಗ್. ವಿಡಿಯೊದಲ್ಲಿರುವ ವ್ಯಕ್ತಿ ನಟ. ಗುಜರಾತಿ ರಂಗಭೂಮಿಯಲ್ಲಿ ಖ್ಯಾತರಾಗಿರುವ ಇವರುತಾರಕ್ ಮೆಹ್ತಾ ಕೀ ಉಲ್ಟಾ ಚಶ್ಮಾ ಎಂಬ ಧಾರವಾಹಿಯಲ್ಲಿ ಹಲವಾರು ಬಾರಿಕಾಣಿಸಿಕೊಂಡಿದ್ದರೆ ಎಂದಿದ್ದರು.

ಈ ಆಧಾರದ ಮೇಲೆ ಆಲ್ಟ್ನ್ಯೂಸ್ ಆ ನಟ ಯಾರು ಎಂದು ಹುಡುಕಿದಾಗ ಅವರ ಹೆಸರು ಶರದ್ ಶರ್ಮಾ ಎಂದು ತಿಳಿದು ಬಂದಿದೆ. ಇವರು ಗುಜರಾತಿ ಸಿನಿಮಾ ಮತ್ತು ಶೋಗಳಲ್ಲಿ ನಟಿಸಿದ್ದಾರೆ. ವಿಡಿಯೊ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಕ್ಕಾಗಿ ಆಲ್ಟ್ ನ್ಯೂಸ್, ಶರ್ಮಾ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು-ಆ ವಿಡಿಯೊ ಶೂಟಿಂಗ್ನದ್ದಾಗಿದೆ. ಕಳೆದ ಸೋಮವಾರ ನಾಸಿಕ್ನಲ್ಲಿ ಶೂಟಿಂಗ್ ನಡೆದಿದ್ದು ನಾನು ರಿಕ್ಷಾ ಚಾಲಕನ ಪಾತ್ರ ನಿರ್ವಹಿಸಿದ್ದೆ. ಶೂಟಿಂಗ್ ವೇಳೆ ಅಲ್ಲಿ ನಿಂತಿದ್ದ ಪ್ರೇಕ್ಷಕರೊಬ್ಬರು ಆ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ನಾನು ಶೂಟ್ ಮಾಡಿದ ದೃಶ್ಯಗಳು ಬಿಡುಗಡೆಯಾದಾಗ ಅದರಲ್ಲಿ ಈ ದೃಶ್ಯಾವಳಿಗಳನ್ನು ನೀವು ಕಾಣಬಹುದು ಎಂದಿದ್ದಾರೆ.

ಶೂಟಿಂಗ್ ವೀಕ್ಷಿಸಿದ್ದ ವ್ಯಕ್ತಿಯೊಬ್ಬರು ದೃಶ್ಯಗಳನ್ನು ರೆಕಾರ್ಡ್ ಮಾಡಿ ತಪ್ಪಾದ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿರುವುದು ಇಲ್ಲಿ ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.