ಬೆಂಗಳೂರು:2019ರ ಲೋಕಸಭಾ ಚುನಾವಣೆಗಾಗಿ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೇ. 23ರಂದು ಪ್ರಕಟವಾಗುವ ಫಲಿತಾಂಶಕ್ಕಾಗಿ ದೇಶದ ಜನರು ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರ ಮುಂದುವರಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ ಮತಗಟ್ಟೆ ಸಮೀಕ್ಷೆಗಳೆಲ್ಲವೂ ನಿಖರವಾಗಿರುವುದಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳು ಹೇಳುತ್ತಿವೆ.

ಈ ಬಾರಿಯ ಚುನಾವಣೆ ಮೋದಿ vs ರಾಹುಲ್ ಆಗಿದ್ದರೂ ರಾಜಕೀಯ ವಿಷಯಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಹರಿದಾಡಿದ್ದವು. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ವೇಗದಲ್ಲಿ ಬಿತ್ತರವಾಗುವ ಫೇಕ್ ನ್ಯೂಸ್‌ಗಳಿಗೆ ಕಡಿವಾಣ ಹಾಕಿದ್ದೇ ಸುದ್ದಿಮನೆಯಫ್ಯಾಕ್ಟ್‌ಚೆಕ್ ತಂಡ. ಫೇಸ್‌ಬುಕ್ ಕೂಡಾ ಈ ಫ್ಯಾಕ್ಟ್‌ಚೆಕ್ ಕಾರ್ಯಕ್ಕೆ ಕೈ ಜೋಡಿಸಿ ಸುಳ್ಳು ಸುದ್ದಿಗಳ ಪ್ರಚಾರವನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರ ವಹಿಸಿತು.

ಅಂದಹಾಗೆ 2019 ಲೋಕಸಭಾಚುನಾವಣೆಯ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಫೇಕ್ ನ್ಯೂಸ್ ಪೇಪರ್ ಕ್ಲಿಪಿಂಗ್, ಫೋಟೊಶಾಪ್ ಮಾಡಿದ ಸ್ಕ್ರೀನ್ ಶಾಟ್‌ಗಳು ಯಾವುವು? ಅವುಗಳ ಹಿಂದಿನ ನಿಜ ಸಂಗತಿ ಏನು? ಇವುಗಳ ಬಗ್ಗೆಫ್ಯಾಕ್ಟ್‌ಚೆಕ್ ಮಾಡಿದ ಸುದ್ದಿಗಳ ಸಂಕಲನ ಇಲ್ಲಿದೆ.

'ಮೋದಿಯ ಅಪ್ಪನ ಮರಣಕ್ಕೆ ಮೋದಿಯೇ ಕಾರಣ ಎಂದು ದೂರಿತ್ತು ಕುಟುಂಬ'
ಪ್ರಧಾನಿ ನರೇಂದ್ರ ಮೋದಿಯ ಅಪ್ಪ ದಾಮೋದರ್‌ದಾಸ್ ಮುಲ್ಚಂದ್ ಮೋದಿ ಅವರ ಮರಣಕ್ಕೆ ಕಾರಣ ಮಗ ನರೇಂದ್ರ ಮೋದಿ ಎಂದು ಅವರ ಕುಟುಂಬಗಳು ಹೇಳುತ್ತಿವೆ ಎಂಬಶೀರ್ಷಿಕೆಯ ನ್ಯೂಸ್ ಪೇಪರ್ ಕ್ಲಿಪಿಂಗ್ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಮೋದಿಯ ಅಪ್ಪ ದಾಮೋದರ್ ದಾಸ್ ಮೋದಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು, ಹೀಗೆ ಚಹಾ ಮಾರುವುದರ ಜತೆಗೆ ಜೇಬುಕಳ್ಳತನ, ರೈಲ್ವೆ ನಿಲ್ದಾಣದಲ್ಲಿ ಕಲ್ಲಿದ್ದಲು, ಕಬ್ಬಿಣ ಕಳ್ಳತನ ಮಾಡಿ ಸಿಕ್ಕಿದ ಹಣದಿಂದ ಸಂಸಾರ ಸಾಗಿಸುತ್ತಿದ್ದರು.ಹೀಗೆ ಕಳ್ಳತನ ಮಾಡಿದ ಹಣದಿಂದ ಅವರ ಚಿನ್ನ ಖರೀದಿಸುತ್ತಿದ್ದು, ಈ ಚಿನ್ನವನ್ನು ಬಾಲಕ ನರೇಂದ್ರ ಮೋದಿ ಕದಿಯುತ್ತಿದ್ದರು.ಮಗನ ಈ ಬುದ್ಧಿಯಿಂದ ಬೇಸತ್ತು ಅವರಿಗೆ ಹೃದಯಾಘಾತವಾಗಿತ್ತು. ಎಫ್‌ಐಆರ್ ದಾಖಲಿಸಿದ್ದರೂ ಕದ್ದ ಚಿನ್ನವನ್ನು ವಾಪಸ್ ಪಡೆಯಲು ಆ ಕುಟುಂಬಕ್ಕೆ ಸಾಧ್ಯವಾಗಿಲ್ಲ.ದಾಮೋದರ್‌ದಾಸ್ ಮುಲ್ಚಂದ್ ಮೋದಿಗೆ ಚಿಕಿತ್ಸೆ ಕೊಡಿಸಲು ಕುಟುಂಬಕ್ಕೆ ಸಾಧ್ಯವಾಗದೆಮೋದಿಯ ಅಪ್ಪ ಅಸು ನೀಗಿದ್ದರು.1996ರಲ್ಲಿ ನರೇಂದ್ರ ಮೋದಿ ವಿರುದ್ಧ ಈ ಎಫ್‌ಐಆರ್ ದಾಖಲಾಗಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಪ್ರಕರಣವನ್ನು ತಳ್ಳುವಂತೆ ಮಾಡಿದ್ದರು.

ಈ ಪೇಪರ್ ಕ್ಲಿಪಿಂಗ್ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಆಲ್ಟ್‌ನ್ಯೂಸ್ ಇದು ಫೇಕ್‌ಸುದ್ದಿ ಎಂದಿದೆ.ಆಲ್ಟ್ ನ್ಯೂಸ್ ತಂಡ ಮೋದಿಯವರ ಕುಟುಂಬವನ್ನು ಸಂಪರ್ಕಿಸಿ, ಈ ಬಗ್ಗೆ ವಿಚಾರಿಸಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಮೋದಿ ಕುಟುಂಬ ಹೇಳಿದೆ. ಆದಾಗ್ಯೂ, ಈ ಪೇಪರ್ ಕ್ಲಿಪಿಂಗ್‌ನಲ್ಲಿ ಸಿಕ್ಕಾಪಟ್ಟೆ ಅಕ್ಷರ ತಪ್ಪುಗಳಿರುವುದರಿಂದ ಇದು ನಕಲಿ ಪೇಪರ್ ಕ್ಲಿಪಿಂಗ್ ಎಂಬುದು ಸ್ಪಷ್ಟವಾಗಿದೆ.

ಫ್ಯಾಕ್ಟ್‌ಚೆಕ್
ನರೇಂದ್ರ ಮೋದಿಯವರ ಅಪ್ಪ 1989ರಲ್ಲಿ ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದರು ಎಂದಿದ್ದಾರೆ ಮೋದಿಯ ಅಣ್ಣ ಸೋಮ್ ಮೋದಿ.ಈ ಹೊತ್ತಲ್ಲಿ ನರೇಂದ್ರ ಮೋದಿ ಕೈಲಾಸ ಮಾನಸರೋವರ ಯಾತ್ರೆಯಲ್ಲಿದ್ದರು. ನರೇಂದ್ರ ಮೋದಿ ಮಾನಸರೋವರ ಯಾತ್ರೆಗೆ ಹೋಗಿ ಬಂದು ಅಪ್ಪನಿಗೆ ಪ್ರಸಾದ ನೀಡಿದ್ದರು, ಮರುದಿನವೇ ಅಪ್ಪ ಕೊನೆಯುಸಿರೆಳೆದರು ಎಂದಿದ್ದಾರೆ ಸೋಮ್.

ಇದೇ ವಿಷಯವನ್ನು ಮೋದಿಯವರ ತಮ್ಮನಲ್ಲಿ ಕೇಳಿದಾಗ ಪೇಪರ್ ಕ್ಲಿಪಿಂಗ್‌ನಲ್ಲಿ ಹೇಳಿರುವುದು ಸುಳ್ಳು.ನಮ್ಮಪ್ಪ 1989ರಲ್ಲಿ ಮೂಳೆ ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದರು.ನರೇಂದ್ರ ಮೋದಿ ಆಗ ಆರ್‌ಎಸ್‌ಎಸ್ ಪ್ರಚಾರಕ್ ಆಗಿದ್ದು, ಅಪ್ಪನ ಅಂತಿಮ ವಿಧಿವಿಧಾನದ ವೇಳೆ ಅವರು ಮನೆಯಲ್ಲಿದ್ದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆಲ್ಟ್ ನ್ಯೂಸ್ ಪ್ರಧಾನಿ ನರೇಂದ್ರ ಮೋದಿಯ ಜೀವನ ಚರಿತ್ರೆ ಬರೆದ ನೀಲಾಂಜನ್ ಮುಖೋಪಧ್ಯಾಯ್ ಅವರನ್ನು ಭೇಟಿ ಮಾಡಿತ್ತು. ಮೋದಿಯವರ ಅಪ್ಪ 1989-90ರಲ್ಲಿ ತೀರಿದ್ದಾರೆ ಎಂದು ಮೋದಿ ಹೇಳಿದ್ದರು ಎಂದಿದ್ದಾರೆ ನೀಲಾಂಜನ್.
‘Narendra Modi: The Man, the Times'ಎಂಬ ಮೋದಿಯ ಜೀವನ ಚರಿತ್ರೆಯ ಪುಟಗಳಲ್ಲಿ ಹೀಗಿದೆ.

ನರೇಂದ್ರ ಮೋದಿ ತಮ್ಮ ಕುಟುಂಬದೊಂದಿಗೆ ಸಂಬಂಧ ಕಡಿದು1967ರಲ್ಲಿಯೇ ಆ ಗ್ರಾಮವನ್ನು ತೊರೆದಿದ್ದರು.1989ರಲ್ಲಿ ಮೋದಿ ಅವರ ಅಪ್ಪ ಮರಣ ಹೊಂದಿದಾಗ ಮೋದಿ ವಾಪಸ್ ಮನೆಗೆ ಬಂದಿದ್ದರು ಎಂದು ಜೀವನಚರಿತ್ರೆಯಲ್ಲಿ ಬರೆದಿದೆ.

ಏತನ್ಮಧ್ಯೆ, 2018ರಲ್ಲಿ ಮೋದಿ ತಮ್ಮ ಭಾಷಣದಲ್ಲಿ 30 ವರ್ಷಗಳ ಹಿಂದೆ ನನ್ನಪ್ಪ ತೀರಿಕೊಂಡಿದ್ದರು ಎಂದಿದ್ದರು

ಒಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಪೇಪರ್ ಕ್ಲಿಪಿಂಗ್‌ನಲ್ಲಿ ಹೇಳುವಂತೆ ನರೇಂದ್ರ ಮೋದಿ ಚಿನ್ನ ಕದ್ದಿದ್ದಾರೆ ಎಂದು ಅವರ ಅಪ್ಪ ಹೃದಯ ಸ್ತಂಭನದಿಂದ ಮರಣಹೊಂದಿಲ್ಲ, ಮೋದಿಯ ಅಪ್ಪನ ಸಾವಿಗೆ ಕಾರಣ ಮೂಳೆಕ್ಯಾನ್ಸರ್.
ಎರಡನೇ ಅಂಶ ಎಂದರೆ ಮೋದಿ ಅಪ್ಪ ಮರಣ ಹೊಂದಿದ್ದು 1989ರಲ್ಲಿ. ಆಗ ಮೋದಿ ಹದಿಹರೆಯದ ಬಾಲಕನಾಗಿರಲಿಲ್ಲ.ನರೇಂದ್ರ ಮೋದಿ ಹುಟ್ಟಿದ್ದು 1950ರಲ್ಲಿ. ಹೀಗಾಗಿ ಅವರ ಅಪ್ಪ ಮರಣಹೊಂದಿದಾಗ ಮೋದಿ ವಯಸ್ಸು 40 ಆಗಿತ್ತು.

ನನಗೆ 42 ಸೀಟು ಕೊಡಿ, ಹಿಂದೂಗಳನ್ನು ಹೇಗೆ ಕಣ್ಣೀರು ಹಾಕಿಸಬೇಕೆಂದು ನಾನು ತೋರಿಸಿಕೊಡುತ್ತೇನೆ: ಮಮತಾ

ನನಗೆ 42 ಸೀಟು ಕೊಡಿ, ಹಿಂದೂಗಳನ್ನು ಹೇಗೆ ಕಣ್ಣೀರು ಹಾಕಿಸಬೇಕೆಂದು ನಾನು ತೋರಿಸಿಕೊಡುತ್ತೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎನ್ನುವ ಪೇಪರ್ ಕ್ಲಿಪಿಂಗ್ ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿತ್ತು.ಬಂಗಾಳದ ಜನಪ್ರಿಯ ಬರ್ತಮಾನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಇದು ಎಂದು ಮಮತಾ ಬ್ಯಾನರ್ಜಿಯ ಫೋಟೊದೊಂದಿಗೆ ಆ ಹೇಳಿಕೆ ಸುದ್ದಿಯಾಗಿತ್ತು.
ಆದರೆ ಅದು ಫೋಟೊಶಾಪ್ ಮಾಡಿದ ಚಿತ್ರ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ಪೇಪರ್ ಕ್ಲಿಪಿಂಗ್‌ನಲ್ಲಿರುವ ಫಾಂಟ್, ಅದರ ಗಾತ್ರ ಮತ್ತು ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಫೋಟೊಶಾಪ್ ಮಾಡಿರುವುದು ಗೊತ್ತಾಗುತ್ತದೆ.ಹಿಂದೂ (হিন্দু ) ಮತ್ತು ಅಳುವಂತೆ (কাঁদা তে) ಮಾಡುತ್ತೇನೆ ಎಂದು ಬರೆದಿರುವ ಪದಗಳು ಈ ವಾಕ್ಯದೊಂದಿಗೆ ಸರಿಹೊಂದುತ್ತಿಲ್ಲ.

ಈ ಎರಡು ಪದಗಳನ್ನು ಫೋಟೊಶಾಪ್ ಮಾಡಿ ಜೋಡಿಸಿರುವುದರಿಂದ ಅಲ್ಲಿ ಸಾಲು ಹೊಂದಿಸಿದ್ದೂ ಸರಿ ಇಲ್ಲ. ಅಲ್ಲಿರುವಪದವನ್ನು ತೆಗೆದು ಬೇರೆ ಪದಗಳನ್ನು ತುರುಕಿರುವುದೂ ಅಲ್ಲಿ ಸ್ಪಷ್ಟವಾಗಿ ಕಾಣುತ್ತದೆ,.

ಎಎಪಿ ನಾಯಕ ರಾಘವ್ ಛಧಾ ಬಗ್ಗೆಯೂ ಹರಿದಾಡಿತ್ತು ಫೇಕ್‌ನ್ಯೂಸ್

ಪಂಜಾಬ್‌ನ ಮತದಾರರು ನನಗೆ ಸಾಥ್ ನೀಡಿದರೆ ನಾನು ಜಾಟ್, ಗುಜ್ಜಾರ್ ಮತ್ತು ಬಿಹಾರಿಗಳನ್ನು ಸೋಲಿಸುತ್ತೇನೆ ಎಂದು ಎಎಪಿ ನೇತಾರ ರಾಘವ್ ಛದಾ ಹೇಳಿದ್ದಾರೆ ಎಂಬ ಪೇಪರ್ ಕ್ಲಿಪಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆದರೆ ಇದೊಂದು ಫೇಕ್ ಕ್ಲಿಪಿಂಗ್. ಇದರಲ್ಲಿ ಹಲವಾರು ಅಕ್ಷರ ದೋಷಗಳಿವೆ.ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಎಂದು ಹೇಳುತ್ತಿದ್ದರೂ ಯಾವ ಪತ್ರಿಕೆಯಲ್ಲಿ ಯಾವಾಗ ಪ್ರಕಟವಾದ ಸುದ್ದಿ ಎಂಬ ದಿನಾಂಕವೂ ಇಲ್ಲಿಲ್ಲ, ಸುದ್ದಿ ಬರೆದ ವರದಿಗಾರನ ಬೈಲೈನ್ ಆಗಲೀ ಬ್ಯೂರೋ ಹೆಸರು ಇಲ್ಲಿಲ್ಲ.

ಇಲ್ಲಿರುವ ವಾಕ್ಯಗಳ ಸಾಲುಗಳು ಸರಿಯಾಗಿ ಹೊಂದಿಕೆಯಾಗಿಲ್ಲ.ಈ ಬಗ್ಗೆಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದ್ದು ಇದು ನಕಲಿ ಪೇಪರ್ ಕ್ಲಿಪಿಂಗ್ ಎಂದು ವರದಿ ಮಾಡಿದೆ.

ಸರ್ಕಾರ ಅಧಿಕಾರ ಕಳೆದುಕೊಂಡರೆ ದೇಶಕ್ಕೆ ಬೆಂಕಿ ಹಾಕುವೆ: ಯೋಗಿ ಆದಿತ್ಯನಾಥ

ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡರೆ ಇಡೀ ದೇಶಕ್ಕೆ ಬೆಂಕಿ ಹಾಕುವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ ಎಂಬ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು.

ಆದರೆ ಈ ಸ್ಕ್ರೀನ್‌ಶಾಟ್‌ನಲ್ಲಿ ತೋರಿಸಿರುವ ಸ್ಕ್ರೀನ್‌ಗ್ರ್ಯಾಬ್ ಗುಜರಾತಿ ಚಾನೆಲ್ ಮಾಂತವ್ಯಾ ನ್ಯೂಸ್‌ನದ್ದು, ಈ ಸುದ್ದಿ ಬಗ್ಗೆಯೂ ಆಲ್ಟ್ ನ್ಯೂಸ್ಫ್ಯಾಕ್ಟ್‌ಚೆಕ್ ಮಾಡಿದೆ.

ಆದಾಗ್ಯೂ, ಮಾಂತವ್ಯಾ ಸುದ್ದಿವಾಹಿನಿಯಲ್ಲಿ ಸುದ್ದಿ ಪ್ರಸಾರವಾದಾಗ ಹೇಳಿಕೆಯೂ ಗುಜರಾತಿ ಭಾಷೆಯಲ್ಲಿಯೇ ಕಾಣಿಸಬೇಕಿತ್ತು.ಮಾಂತವ್ಯಾದಲ್ಲಿ ಹಿಂದಿ ಭಾಷೆಯಲ್ಲಿ ಹೇಳಿಕೆ ಕಾಣಿಸಿಕೊಂಡಿರುವ ಕಾರಣ ಇದು ಫೋಟೊಶಾಪ್ ಎಂಬುದು ಸ್ಪಷ್ಟವಾಗಿದೆ.

'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದಸ್ಮೃತಿ ಇರಾನಿ'

ಪ್ರಧಾನಿ ನರೇಂದ್ರ ಮೋದಿ ಸೋತರೆ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಕೇಂದ್ರ ಸಚಿವೆಸ್ಮೃತಿ ಇರಾನಿ ಹೇಳಿದ್ದಾರೆ ಎಂಬ ಸುದ್ದಿಯ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.ಆದರೆ ಸ್ಮೃತಿ ಇರಾನಿ ಈ ರೀತಿ ಹೇಳಿಕೆ ನೀಡಿಲ್ಲ ಎಂದುಆಲ್ಟ್ ನ್ಯೂಸ್ಫ್ಯಾಕ್ಟ್‌ಚೆಕ್ ಮಾಡಿದೆ.

ಸ್ಮೃತಿ ಇರಾನಿ ಈ ರೀತಿಯ ಹೇಳಿಕೆ ನೀಡಿದ್ದರೇ ಎಂದು ಗೂಗಲಿಸಿದಾಗ ಈ ರೀತಿಯ ಹೇಳಿಕೆ ಯಾವುದೂ ಸಿಕ್ಕಿಲ್ಲ.ಆದರೆಪ್ರಧಾನ್ ಸೇವಕ್ನರೇಂದ್ರ ಮೋದಿನಿವೃತ್ತಿ ಹೊಂದಲು ನಿರ್ಧರಿಸಿದ ದಿನ ತಾನು ಭಾರತೀಯ ರಾಜಕಾರಣದಿಂದ ಹೊರಹೋಗುತ್ತೇನೆ ಎಂದುಸ್ಮೃತಿಹೇಳಿದ್ದರು. ಗಮನಿಸಿಸ್ಮೃತಿ ಈ ಹೇಳಿಕೆ ನೀಡಿದ್ದು ಸುದ್ದಿಗೋಷ್ಠಿಯಲ್ಲಿ ಅಲ್ಲ, ಫೆಬ್ರುವರಿಯಲ್ಲಿಪುಣೆಯಲ್ಲಿ ನಡೆದ ವರ್ಡ್ಸ್ ಕೌಂಟ್ ಫೆಸ್ಟಿವಲ್‍ನಲ್ಲಿ.

ವೈರಲ್ ಪೋಸ್ಟ್ ಬಗ್ಗೆ ಕೇಳಲುಆಲ್ಟ್ ನ್ಯೂಸ್ ತಂಡಎಬಿಪಿ ನ್ಯೂಸ್‍ನ ಹಿರಿಯ ಸಂಪಾದಕ ಪಂಕಜ್ ಝಾ ಅವರನ್ನು ಸಂಪರ್ಕಿಸಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿರುವುದು ಎಡಿಟ್ ಮಾಡಿದ ಸ್ಕ್ರೀನ್ ಶಾಟ್ ಎಂದಿದ್ದಾರೆ.

ಸ್ಮೃತಿ ಇರಾನಿ ನಡೆಸಿದ ಸುದ್ದಿಗೋಷ್ಠಿ ಎಬಿಪಿ ನ್ಯೂಸ್‌ನಲ್ಲಿ ಪ್ರಸಾರವಾಗಿದ್ದು ಈ ವಿಡಿಯೊದ ಸ್ಕ್ರೀನ್ ಶಾಟ್ ತೆಗೆದು ಸ್ಮೃತಿ ಹೇಳಿಕೆಯನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.