ಬಾಲಿವುಡ್ನ ಖ್ಯಾತ ನಟ,ಇತ್ತೀಚೆಗೆ ನಿಧನರಾದ ದಿಲೀಪ್ ಕುಮಾರ್ ಅವರು ತಮ್ಮ ಆಸ್ತಿಯನ್ನು ವಕ್ಫ್ ಮಂಡಳಿಗೆ ನೀಡಿದ್ದಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ. ಟ್ವಿಟರ್ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, ದಿಲೀಪ್ ಕುಮಾರ್ ಅವರ ಇಸ್ಲಾಂ ಮೂಲವೇ ಇದಕ್ಕೆ ಕಾರಣ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ₹98 ಕೋಟಿ ದಾನ ನೀಡಿದ್ದಾರೆ ಎಂದು ಕೆಲವರು ಉಲ್ಲೇಖಿಸಿದ್ದಾರೆ. ದಿಲೀಪ್ ಕುಮಾರ್ ಅವರು ಪಾಕಿಸ್ತಾನದ ಪೆಶಾವರದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಅವರು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು.

ವಕ್ಫ್ ಮಂಡಳಿಗೆ ದಿಲೀಪ್ ಕುಮಾರ್ ದೇಣಿಗೆ ನೀಡಿದ ವಿಚಾರವನ್ನು ಅವರ ಮ್ಯಾನೇಜರ್ ಫೈಸಲ್ ಫಾರೂಕಿ ಅಲ್ಲಗಳೆದಿದ್ದಾರೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಅವರ ಆಸ್ತಿ ಏನಿದ್ದರೂ ಅವರ ಪತ್ನಿ ಸಾಯಿರಾ ಬಾನು ಅವರಿಗೆ ಸೇರಿದ್ದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ವಕ್ಫ್ ಮಂಡಳಿ ಸಿಇಒ ಅನೀಸ್ ಶೇಖ್ ಅವರನ್ನು ಸಂಪರ್ಕಿಸಿದಾಗ, ದಿಲೀಪ್ ಕುಮಾರ್ ಅವರಿಂದ ಯಾವುದೇ ದೇಣಿಗೆ ಬಂದಿಲ್ಲ ಎಂದು ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.