ಹಲವು ಹುಡುಗ, ಹುಡುಗಿಯರು ಇದ್ದ ಹುಕ್ಕಾಬಾರ್‌ನಲ್ಲಿಮಧ್ಯಪ್ರದೇಶದ ಪೊಲೀಸರು ಶೋಧ ನಡೆಸಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ. ‘ಈ ಗುಂಪಿನಲ್ಲಿ15 ಮುಸ್ಲಿಂ ಹುಡುಗರ ಜೊತೆ 15 ಹಿಂದೂ ಹುಡುಗಿಯರು ಇದ್ದು, ಒಬ್ಬ ಮುಸ್ಲಿಂ ಹುಡುಗಿಯೂ ಇಲ್ಲ. ಹಿಂದೂಗಳು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸುವಾಗ ಎಚ್ಚರವಿರಲಿ’ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಉಲ್ಲೇಖಿಸಿದ್ದಾರೆ. ಇದು ಧರ್ಮದ ಆಯಾಮದಲ್ಲಿ ಚರ್ಚೆಯಾಗುತ್ತಿದೆ.

ಇದು ಮಧ್ಯಪ್ರದೇಶಕ್ಕೆ ಸಂಬಂಧಿಸಿದ ವಿಡಿಯೊ ಅಲ್ಲ ಎಂದುಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ವೇದಿಕೆ ತಿಳಿಸಿದ್ದು, ಇದಕ್ಕೆ ಧರ್ಮದ ಆಯಾಮವಿಲ್ಲ ಎಂದೂ ಸ್ಪಷ್ಪಪಡಿಸಿದೆ. ಆಗ್ರಾದಲ್ಲಿ ಆಪ್ತ ಭಂಗಿಯಲ್ಲಿದ್ದ ಜನರ ಗುಂಪೊಂದನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಅದನ್ನು ವಿಡಿಯೊ ಮಾಡಿ ಹಂಚಿಕೊಂಡಿದ್ದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಗುಂಪಿನಲ್ಲಿದ್ದವರು ಸಂಗಾತಿಗಳಾಗಿದ್ದು, ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಈ ವಿಡಿಯೊವನ್ನು ಧರ್ಮದ ಆಧಾರದಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.