ಮಲ್ಲಪುರ (ಕೇರಳ): ಇಲ್ಲಿನ ನಿಲಂಬೂರು ಮರಗಳ ತೋಪಿನಲ್ಲಿ ಬ್ರಿಟೀಷರು ನೆಟ್ಟಿದ್ದ 114 ವರ್ಷ ಹಳೆಯ ತೇಗದ ಮರವೊಂದು ₹ 40 ಲಕ್ಷಕ್ಕೆ ಹರಾಜಾಗಿದೆ.

1909ರಲ್ಲಿ ನೆಟ್ಟ ಮರ ಇದಾಗಿದ್ದು, ಇತ್ತೀಚೆಗಷ್ಟೇ ಧರೆಗುರುಳಿತ್ತು. ಹೀಗಾಗಿ ಅದನ್ನು ಹರಾಜು ಮಾಡಲಾಗಿತ್ತು.

ನೆಡುಂಕಯಮ್ ಅರಣ್ಯ ಡಿಪೋದಲ್ಲಿ ಫೆಬ್ರುವರಿ 10 ರಂದು ನಡೆದ ಹರಾಜಿನಲ್ಲಿ ವರ್ಧಮಾನ್ ಟಿಂಬರ್ ಮಾಲೀಕ ಅಜನೀಶ್ ಕುಮಾರ್ ಅವರು, ₹ 39.25 ಲಕ್ಷಕ್ಕೆ ಖರೀದಿ ಮಾಡಿದರು. ಹರಾಜು ತುರುಸಿನಿಂದ ಕೂಡಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

8 ಘನ ಮೀಟರ್ ದಪ್ಪದ ಈ ಮರವನ್ನು, ಮೂರು ತುಂಡುಗಳನ್ನಾಗಿ ಮಾಡಿ ಹರಾಜು ಮಾಡಲಾಯಿತು.

3 ಮೀಟರ್ ಉದ್ದ ಇದ್ದ ಪ್ರಮುಖ ತುಂಡು ₹ 23 ಲಕ್ಷಕ್ಕೆ ಹರಾಜಾದರೆ, ಉಳಿದೆರಡು ತುಂಡುಗಳು ಕ್ರಮವಾಗಿ ₹ 11 ಲಕ್ಷ ಹಾಗೂ ₹ 5.25 ಲಕ್ಷಕ್ಕೆ ಬಿಕರಿಯಾದವು.

‘ನಮಗೆ ಇದರಿಂದ ಭಾರೀ ಸಂತೋಷವಾಗಿದೆ. 1909ರಲ್ಲಿ ಬ್ರಿಟೀಷರು ನೆಟ್ಟಿದ್ದ ಈ ತೋಪನ್ನು ಸಂರಕ್ಷಿತಾರಣ್ಯವಾಗಿ ಮಾಡಲಾಗಿತ್ತು. ಒಟ್ಟು 8 ಘನ ಮೀಟರ್ ಇದ್ದ ಈ ಮರ ಒಳ್ಳೆಯ ಬೆಲೆಗೆ ಹರಾಜಾಗಿದೆ. ಇದು ಈವರೆಗೆ ಈ ಡಿಪೋದಲ್ಲಿ ಹರಾಜಾದ ದೊಡ್ಡ ಮೊತ್ತದ ಮರ. ಆ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ನಮಗೆ ಖುಷಿ ಅನಿಸುತ್ತಿದೆ. ನಿಲಂಬೂರು ತೇಗದ ಮರ ಅಂತರರಾಷ್ಟ್ರೀಯ ಬ್ರಾಂಡ್ ಆಗಿದ್ದು, ಐತಿಹಾಸಿಕ ಮಹತ್ವವೂ ಇದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಾಜಿನಲ್ಲಿ ಮರದ ತುಂಡುಗಳನ್ನು ಖರೀದಿ ಮಾಡಿದ ಅಜನೀಶ್ ಕುಮಾರ್ ಅವರು ಕೂಡ ತಾವು ಬಿಡ್ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿರುವ ಅವರು, ಮರದ ದಿಮ್ಮಿಗಳನ್ನು ನಿಲಂಬೂರಿನಿಂದ ತಿರುವನಂತಪುರಕ್ಕೆ ಸಾಗಿಸಲು ₹ 15,000 ಖರ್ಚು ಮಾಡಿದ್ದಾಗಿ ಹೇಳಿದ್ದಾರೆ.

ಈ ಅಪರೂಪದ ಮರವನ್ನು ಸಾಗಾಟ ಮಾಡುವ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.

ನಿಲಂಬೂರು ತೇಗದ ತೋಪು ವಿಶ್ವದ ಹಳೆಯ ತೋಪುಗಳಲ್ಲಿ ಒಂದಾಗಿದ್ದು, ಮಲಬಾರ್‌ನ ಮಾಜಿ ಬ್ರಿಟೀಷ್ ಕಲೆಕ್ಟರ್ ಎಚ್.ವಿ ಕೊನೊಲ್ಲಿ ಅವರ ಹೆಸರನ್ನು ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.