ನವದೆಹಲಿ: ಯುರೋಪ್ನ ಪ್ರತಿಷ್ಠಿತ ಎರಾಸ್ಮಸ್ ಮುಂಡಸ್ ವಿದ್ಯಾರ್ಥಿ ವೇತನಕ್ಕೆ 2024–2026ನೇ ಸಾಲಿಗೆ 76 ಮಹಿಳೆಯರು ಸೇರಿದಂತೆ ಒಟ್ಟು 146 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಯುರೋಪಿಯನ್ ಭಾರತ ಒಕ್ಕೂಟದ ನಿಯೋಗ ಶುಕ್ರವಾರ ತಿಳಿಸಿದೆ.

ಎರಡು ವರ್ಷಗಳ ಜಂಟಿ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ನೀಡುವ ಎರಾಸ್ಮಸ್ ಮುಂಡಸ್ ವಿದ್ಯಾರ್ಥಿ ವೇತನಕ್ಕಾಗಿ 137 ದೇಶಗಳ 2603 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಯ ಒಕ್ಕೂಟ ಜಂಟಿಯಾಗಿ ಈ ಕಾರ್ಯಕ್ರಮದ ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತದೆ.

‘ಎರಾಸ್ಮಸ್ ಮುಂಡಸ್ ಜಂಟಿ ಸ್ನಾತಕೋತ್ತರ ಕಾರ್ಯಕ್ರಮವು 2024ಕ್ಕೆ 20 ವರ್ಷ ಪೂರೈಸಲಿದೆ. ಇದು ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಮತ್ತು ಐರೋಪ್ಯ ಒಕ್ಕೂಟಕ್ಕೆ ಸೇರದ ದೇಶಗಳ ಮೇಲೆ ಕಾರ್ಯಕ್ರಮದ ಸಕಾರಾತ್ಮಕ ಪರಿಣಾಮವನ್ನು ಸೂಚಿಸುತ್ತದೆ’ ಎಂದು ಹೇಳಿಕೆ ತಿಳಿಸಿದೆ.

2004ರಲ್ಲಿ ಈ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಭಾರತೀಯ ವಿದ್ಯಾರ್ಥಿಗಳ ಅತಿಹೆಚ್ಚು ಪ್ರಯೋಜನ ಪಡೆದಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದಿದ್ದಾರೆ.

2004ರಲ್ಲಿ ಇದು ಪ್ರಾರಂಭವಾದಾಗಿನಿಂದ ಒಟ್ಟಾರೆ 6000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಎರಾಸ್ಮಸ್ ಅಲ್ಪ ಹಾಗೂ ದೀರ್ಘಕಾಲಿಕ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದಾರೆ. ಇದು ಸಂಶೋಧನಾ ಸೌಲಭ್ಯ ಸೇರಿದಂತೆ ವೃತ್ತಿಪರ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಐರೋಪ್ಯ ದೇಶಗಳ ಎರಡು ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಹಾಗೂ ಸಂಶೋಧನೆ ಕೈಗೊಳ್ಳುವ ಅವಕಾಶ ಪಡೆಯುತ್ತಾರೆ. ಔಷಧ, ಎಂಜಿನಿಯರಿಂಗ್, ಡಾಟಾ ಹಾಗೂ ಸಮಾಜವಿಜ್ಞಾನಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳಲ್ಲಿ ಜಂಟಿ ಅಥವಾ ಎರಡು ಪದವಿಗಳನ್ನು ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.