ಮುಂಬೈ: ಸರಣಿ ಸಲೂನ್ ಮಳಿಗೆಗಳನ್ನು ಹೊಂದಿರುವ ಕಂಪನಿಯೊಂದರ 28 ವರ್ಷ ವಯಸ್ಸಿನ ಸಹೋದ್ಯೋಗಿ ಕೃತಿ ವ್ಯಾಸ್ ಎನ್ನುವವರನ್ನು ಹತ್ಯೆ ಮಾಡಿದ ಇಬ್ಬರಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಕೃತಿ ಅವರ ಮೃತದೇಹವು ಇದುವರೆಗೂ ಪತ್ತೆಯಾಗಿಲ್ಲ. ಸಿದ್ಧೇಶ್ ತಾಮ್ಹಣಕರ್ ಮತ್ತು ಅವರ ಮಹಿಳಾ ಸಹೋದ್ಯೋಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಈ ಪ್ರಕರಣದ ವಿಚಾರಣೆ ನಡೆಸಿದ್ದರು.

ಸಿದ್ಧೇಶ್ ಮತ್ತು ಅವರ ಮಹಿಳಾ ಸಹೋದ್ಯೋಗಿ ಕೃತಿ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು. ಕೃತಿ ಅವರು ಹಣಕಾಸು ವ್ಯವಸ್ಥಾಪಕಿ ಆಗಿದ್ದರು.

ಅಪರಾಧಿಗಳಲ್ಲಿ ಒಬ್ಬರಿಗೆ ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಕೃತಿ ಅವರು ಜ್ಞಾಪನಾಪತ್ರ ನೀಡಿದ್ದರು. ಇದಕ್ಕಾಗಿ ಕೃತಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಆರೋಪಿಸಲಾಗಿತ್ತು. ಸಿದ್ಧೇಶ್ ಮತ್ತು ಅವರ ಮಹಿಳಾ ಸಹೋದ್ಯೋಗಿ ಕೆಲಸ ಕಳೆದುಕೊಂಡಿದ್ದರು, ಅಷ್ಟೇ ಅಲ್ಲ, ತಮ್ಮ ನಡುವಿನ ಸಂಬಂಧವು ಬಹಿರಂಗವಾಗಬಹುದು ಎಂಬ ಭೀತಿಗೆ ಗುರಿಯಾಗಿದ್ದರು.

ಅಪರಾಧಿಗಳ ಪೈಕಿ ಒಬ್ಬರ ಕಾರಿನಲ್ಲಿ ಪತ್ತೆಯಾದ ರಕ್ತದ ಮಾದರಿಯ ಡಿಎನ್ಎ ಪರೀಕ್ಷೆ ನಡೆಸಿ, ಅದರ ಆಧಾರದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.