ಜಮ್ಮು: 3,200ಕ್ಕೂ ಹೆಚ್ಚು ಯಾತ್ರಿಗಳನ್ನು ಒಳಗೊಂಡ 25ನೇ ತಂಡವು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ ಇಂದು (ಸೋಮವಾರ) ಮುಂಜಾನೆ ಪ್ರಯಾಣ ಬೆಳೆಸಿದೆ.

3,281 ಯಾತ್ರಾರ್ಥಿಗಳೊಂದಿಗೆ 25ನೇ ತಂಡ ಸಿಆರ್ಪಿಎಫ್ ಬೆಂಗಾವಲು ಅಡಿಯಲ್ಲಿ 111 ವಾಹನಗಳಲ್ಲಿ ಭಗವತಿ ನಗರದ ಬೇಸ್ ಕ್ಯಾಂಪ್ನಿಂದ ಬೆಳಗಿನ ಜಾವ 3 ಗಂಟೆಗೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರಲ್ಲಿ, 1,979 ಯಾತ್ರಾರ್ಥಿಗಳು ಸಾಂಪ್ರದಾಯಿಕ 48 ಕಿ.ಮೀ ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ತೆರಳಿದರೆ, 1,302 ಯಾತ್ರಿಕರು 14 ಕಿ.ಮೀ ಕಡಿದಾದ ಬಾಲ್ಟಾಲ್ ಮಾರ್ಗವನ್ನು ಆಯ್ದುಕೊಂಡಿದ್ದಾರೆ ಅವರು ಹೇಳಿದ್ದಾರೆ.
.ಅಮರನಾಥ ಯಾತ್ರೆ ಹೊರಟ 3,471 ಯಾತ್ರಿಕರನ್ನು ಒಳಗೊಂಡ 23ನೇ ತಂಡ.
ಜೂನ್ 29ರಂದು ಆರಂಭಗೊಂಡಿರುವ ಅಮರನಾಥ ಯಾತ್ರೆ ಆಗಸ್ಟ್ 19ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ 3.80 ಲಕ್ಷ ಮಂದಿ ಯಾತ್ರೆಯನ್ನು ಕೈಗೊಂಡಿದ್ದಾರೆ.

3,880 ಮೀಟರ್ ಎತ್ತರದ ಪವಿತ್ರ ಗುಹೆ ದೇಗುಲಕ್ಕೆ ಕಳೆದ ವರ್ಷ 4.5 ಲಕ್ಷ ಭಕ್ತರು ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದರು.
.ಅಮರನಾಥ ಯಾತ್ರೆ ಹೊರಟ 24ನೇ ತಂಡ: ಈವರೆಗೆ 3 ಲಕ್ಷ ಜನರ ಭೇಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.