ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವತಿಯ ಹೊಟ್ಟೆಯಿಂದ 2 ಕೆ.ಜಿ ಕೂದಲು ಹೊರ ತೆಗೆದ ವೈದ್ಯರು!

Published : 6 ಅಕ್ಟೋಬರ್ 2024, 11:42 IST
Last Updated : 6 ಅಕ್ಟೋಬರ್ 2024, 11:42 IST
ಫಾಲೋ ಮಾಡಿ
Comments

ಬರೇಲಿ/ಲಖನೌ: 16 ವರ್ಷದಿಂದ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ 21 ವರ್ಷದ ಯುವತಿಯ ಹೊಟ್ಟೆಯಿಂದ 2 ಕೆ.ಜಿ ಕೂದಲು ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

‘ವೈದ್ಯಕೀಯವಾಗಿ ಈ ಸ್ಥಿತಿಯನ್ನು ಟ್ರೈಕೊಫೇಜಿಯಾ ಅಥವಾ ರಾಪುಂಜೆಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದೊಂದು ದೀರ್ಘಕಾಲದ ಮಾನಸಿಕ ಅಸ್ವಸ್ಥೆಯಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ತಮ್ಮದೇ ಕೂದಲನ್ನು ಕಿತ್ತು ತಿನ್ನುವ ಅಭ್ಯಾಸ ಇರುತ್ತದೆ’ ಎಂದು ಬರೇಲಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎಂಪಿ ಸಿಂಗ್ ತಿಳಿಸಿದರು.

‘ಸಿಟಿ ಸ್ಕ್ಯಾನ್ ವೇಳೆ ಕೂದಲು ಗಡ್ಡೆ ಪತ್ತೆಯಾಗಿದ್ದು, ಯುವತಿಯನ್ನು ಆಪ್ತಸಮಾಲೋಚನೆಗೆ ಒಳಪಡಿಸಲಾಯಿತು. ಈ ವೇಳೆ ಐದನೇ ವಯಸ್ಸಿನಿಂದ ಕೂದಲು ತಿನ್ನುತ್ತಿರುವುದಾಗಿ ಯುವತಿ ತಿಳಿಸಿದ್ದಳು’ ಎಂದರು.

‘ಕೂದಲು ಆಕೆಯ ಹೊಟ್ಟೆಯ ಕುಳಿಯಲ್ಲಿ ತುಂಬಿಕೊಂಡಿದ್ದು, ಕರುಳಿನ ಭಾಗಗಳಿಗೂ ಹರಡಿತ್ತು’ ಎಂದು ಹೇಳಿದರು.

ಸೆಪ್ಟೆಂಬರ್ 26ರಂದು ಶಸ್ತ್ರಚಿಕಿತ್ಸೆ ನಡೆಸಿ 2 ಕೆ.ಜಿ ಕೂದಲು ಗಡ್ಡೆಯನ್ನು ಹೊರತೆಗೆಯಲಾಯಿತು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT