ನವದೆಹಲಿ: ಕಳೆದ ಒಂದು ವರ್ಷದಲ್ಲಿ ಶೇಕಡ 43ರಷ್ಟು ಭಾರತೀಯ ಗ್ರಾಹಕರು ಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಖರೀದಿಸಿಲ್ಲ ಎಂಬುದು ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ.

ಚೀನಾದೊಂದಿಗಿನ ಗಾಲ್ವನ್ ಕಣಿವೆಯ ಸಂಘರ್ಷದ ಬಳಿಕ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹಲವಾರು ಭಾರತೀಯ ಹೇಳಿದ್ದರು. ಈ ಸಂಬಂಧ ಜೂನ್ 1–10ರ ತನಕ 281 ಜಿಲ್ಲೆಗಳಲ್ಲಿಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ 17,800 ಮಂದಿ ಭಾಗವಹಿಸಿದ್ದರು. ಈ ಸಮೀಕ್ಷೆಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ಶೇಕಡ 43 ರಷ್ಟು ಭಾರತೀಯ ಗ್ರಾಹಕರು ಚೀನಾದ ಉತ್ಪನ್ನಗಳನ್ನು ಖರೀದಿಸಿಲ್ಲ ಎಂದು ‘ಲೋಕಲ್ ಸರ್ಕಲ್’ ಎನ್ನುವ ಆನ್ಲೈನ್ ಕಂಪನಿ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಭಾರತದಲ್ಲಿ ಏಕಾಏಕಿ ಕೋವಿಡ್ ಉಲ್ಬಣಗೊಂಡ ಪರಿಣಾಮ ಚೀನಾದಿಂದ ವೈದ್ಯಕೀಯ ಸಾಮಾಗ್ರಿಗಳು, ಆಮ್ಲಜನಕ ಪರಿಕರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಯಿತು. ಇದರಿಂದಾಗಿ 2021ರ ಜನವರಿ–ಮೇ ತಿಂಗಳಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವು ಶೇಕಡ 42 ರಷ್ಟು ಹೆಚ್ಚಿದೆ. ಇದರಲ್ಲಿ ಗ್ರಾಹಕ ಸರಕುಗಳುಶೇಕಡ 12 ಮತ್ತು ಬಂಡವಾಳ ಸರಕುಗಳು ಶೇಕಡ 30ರಷ್ಟು ಪಾಲನ್ನು ಹೊಂದಿವೆ.

‘ಸಮೀಕ್ಷೆಯಲ್ಲಿ ಭಾಗಿಯಾದ ಶೇಕಡ 34ರಷ್ಟು ಗ್ರಾಹಕರು ತಾವು 1–2 ಉತ್ಪನ್ನಗಳನ್ನು ಖರೀದಿಸಿದ್ದೇವೆ ಎಂದರು. ಇನ್ನೂ ಶೇಕಡ 8ರಷ್ಟು ಜನರು 3–5, ಶೇಕಡ 4ರಷ್ಟು ಮಂದಿ 5-10, ಶೇಕಡ 1ರಷ್ಟು ಗ್ರಾಹಕರು 15–20 ಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಖರೀದಿಸಿದ್ದಾರೆ’ ಎಂದು ವರದಿ ಹೇಳಿದೆ.

‘ನವೆಂಬರ್ 2020ರಲ್ಲಿ ಶೇಕಡ 71ರಷ್ಟು ಗ್ರಾಹಕರು ಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಬಳಸಿಲ್ಲ ಎಂಬುದು ಇನ್ನೊಂದು ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದು ವರದಿ ಹೇಳಿದೆ.

‘2020ರಲ್ಲಿ ಚೀನಾದೊಂದಿಗಿನ ವ್ಯಾಪಾರವು ಶೇಕಡ 5.6ರಷ್ಟು ಇಳಿಕೆಯಾಗಿತ್ತು. ಆದರೆ 5 ತಿಂಗಳ ಬಳಿಕ 2021ರಲ್ಲಿ ಈ ಪ್ರಮಾಣವು ಶೇಕಡ 42ಕ್ಕೆ ಏರಿಕೆಯಾಗಿದೆ’ ಎಂದು ಲೋಕಲ್ ಸರ್ಕಲ್ ವರದಿ ಹೇಳಿದೆ.

‘ಲಾಕ್ಡೌನ್ ಆರ್ಥಿಕತೆ ಮೇಲೆ ಹೆಚ್ಚಿನ ಪರಿಣಾಮ ಬೀರಿರುವುದರಿಂದ ಹೆಚ್ಚಿನ ಜನರು ಅಗ್ಗವಾಗಿರುವ ಚೀನಾದ ಉತ್ಪನ್ನಗಳನ್ನು ಖರೀದಿಸಿದ್ಧಾರೆ’ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.