ನವದೆಹಲಿ: ಸೆಪ್ಟೆಂಬರ್ 11ರ ವರೆಗೆ ದೇಶದಲ್ಲಿ 45,62,414 ಸೋಂಕು ಪ್ರಕರಣಗಳು ವರದಿಯಾಗಿದ್ದು ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 76,271 ಆಗಿದೆ. ಸಾವಿನ ಪ್ರಮಾಣ ಶೇ.1.67ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ ಅವರು 35,42,663 ಮಂದಿ ಕೋವಿಡ್‌ನಿಂದಗುಣಮುಖರಾಗಿದ್ದಾರೆ.ಅಂದರೆ ಗುಣಮುಖರಾದವರ ಪ್ರಮಾಣ ಶೇ. 77.65 ಆಗಿದೆ ಎಂದಿದ್ದಾರೆ.

ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ, ಅಸ್ಸಾಂ, ಕೇರಳ ಮತ್ತು ಗುಜರಾತಿನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 2.79 ಕೋಟಿ ಕೋವಿಡ್ ಪ್ರಕರಣಗಳಿದ್ದು 9.05 ಲಕ್ಷ ಸಾವು ಸಂಭವಿಸಿದೆ. ಸಾವಿನ ಪ್ರಮಾಣ ಶೇ. 3.2 ಆಗಿದೆ.

ಸರ್ಕಾರ ಮತ್ತು ಇಡೀ ಸಮಾಜದ ಮುತುವರ್ಜಿಯಿಂದಾಗಿ ಇತರ ದೇಶಗಳಿಗೆ ಹೋಲಿಸಿದೆ ಸೋಂಕು ಪ್ರಕರಣ ಮತ್ತು ಸಾವಿನ ಸಂಖ್ಯೆ ಕಡಿಮೆ ಆಗಿದೆ.ಸೋಂಕು ಪ್ರಸರಣ ಮತ್ತು ಸೋಂಕು ಹರಡುವಿಕೆಗೆ ಕಾರಣವಾಗುವ ಅಂಶಗಳ ಬಗ್ಗೆ ಸಂಶೋಧನೆಗಳು ನಡೆದುಬರುತ್ತಿವೆ. ಯಾವುದಾದರೂ ವ್ಯಕ್ತಿಗೆ ಕೊರೊನಾವೈರಸ್ಸೋಂಕು ತಗುಲಿದ್ದರೆ 1-14 ದಿನದೊಳಗೆ ಸೋಂಕು ಇರುವುದು ತಿಳಿಯುತ್ತದೆ.ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮೊದಲಾದವುಗಳು ಸೋಂಕು ಲಕ್ಷಣಗಳು.ಭಾರತದಲ್ಲಿ ಶೇ.92ರಷ್ಟು ಪ್ರಕರಣಗಳು ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವಂತದ್ದಾಗಿದೆಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರಗಳಿಂದಾಗಿ ಪ್ರಕರಣಗಳ ಸಂಖ್ಯೆ 14-29 ಲಕ್ಷ ಮತ್ತು 37,000- 38,000 ಸಾವು ಸಂಭವಿಸುವುದನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಹೇಳಿದ ಸಚಿವರು ಮೊದಲು ದೇಶದಲ್ಲಿ ಪಿಪಿಇ ತಯಾರಿಕೆ ಇರಲಿಲ್ಲ. ಆದರೆ ಇವತ್ತು ನಾವು ನಮಗೆ ಅಗತ್ಯವಿರುವಷ್ಟು ಪಿಪಿಇ ತಯಾರಿಸುತ್ತಿದ್ದು, ರಫ್ತು ಮಾಡುವ ಹಂತಕ್ಕೆ ತಲುಪಿದ್ದೇವೆ. ಕೇಂದ್ರ ಸರ್ಕಾರವು ದೇಶದೊಳಗೆ ರೋಗ ಬರದಂತೆ ಮತ್ತು ರೋಗ ಹರಡದಂತೆ ಮಾಡಲು ಅನೇಕ ಕಾರ್ಯಗಳನ್ನು ಕೈಗೊಂಡಿದೆ ಎಂದಿದ್ದಾರೆ.

ನನ್ನ ಅಧ್ಯಕ್ಷತೆಯಲ್ಲಿ ವಿದೇಶಾಂಗ ಸಚಿವರು, ವಿಮಾನಯಾನ ಸಚಿವರು ಸೇರಿದಂತೆ ಹಲವಾರು ಸಚಿವರು ಫೆ.3, 2020ರಿಂದ ಸುಮಾರು 20 ಬಾರಿ ಭೇಟಿ ಮಾಡಿದ್ದಾರೆ.ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಗೃಹ ಸಚಿವಾಲಯವು ಮಾರ್ಚ್ 10ರಂದು 11 ಅಧಿಕೃತ ಗುಂಪುಗಳನ್ನು ಮಾಡಿ ಕಾರ್ಯನಿರ್ವಹಿಸಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ಅಪನಂಬಿಕೆ ನಿವಾರಣೆಗೆ ನಾನೇ ಮೊದಲು ಲಸಿಕೆ ಪಡೆವೆ: ಹರ್ಷವರ್ಧನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.