ಚಂಡೀಗಢ: ಐದು ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದ ಮಾದಕವಸ್ತು ಕಳ್ಳಸಾಗಣೆಯ ಜಾಲವೊಂದನ್ನು ಭೇದಿಸಿ 48 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಜಾಲದಲ್ಲಿದ್ದ ಮೂವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೂವರು ಆರೋಪಿಗಳಿಂದ ₹21 ಲಕ್ಷ ನಗದು, ನಗದು ಎಣಿಕೆ ಯಂತ್ರ ಹಾಗೂ ಮೂರು ಐಷಾರಾಮಿ ವಾಹನಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಈ ವರ್ಷ ವಶಪಡಿಸಿಕೊಳ್ಳಲಾದ ಭಾರಿ ಪ್ರಮಾಣದ ಮಾದಕ ವಸ್ತು ಪ್ರಕರಣವಿದು ಎಂದು ಡಿಜಿಪಿ ಗೌರವ್ ಯಾದವ್ ಹೇಳಿದರು.

ಈ ಜಾಲವು ದೇಶದ ಗಡಿಯಾಚೆಗಿನ ಮತ್ತು ಅಂತರ ರಾಜ್ಯ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರ, ಗುಜರಾತ್ ರಾಜ್ಯದಲ್ಲಿ ವ್ಯಾಪಿಸಿರುವ ದೇಶೀಯ ಜಾಲದ ಜೊತೆಗೆ ಇರಾನ್, ಅಫ್ಗಾನಿಸ್ತಾನ, ಟರ್ಕಿ, ಪಾಕಿಸ್ತಾನ ಮತ್ತು ಕೆನಡಾದಲ್ಲೂ ಇವರ ಚಟುವಟಿಕೆಗಳು ಹರಡಿವೆ ಎಂದು ಯಾದವ್ ಹೇಳಿದರು.

ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಜಾಲ ಹತ್ತಿಕ್ಕಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.