ಗುಮ್ಲಾ: ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದ ಐವರು ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮಾವೋವಾದಿಗಳಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಬೈನ್, ಮೂರು ರೈಫಲ್, ದೇಶೀ ನಿರ್ಮಿತ ಪಿಸ್ತೂಲ್, 137 ಜೀವಂತ ಕಾರ್ಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಜಿಲ್ಲೆಯ ಅಂಜನ್ ಹಿರಣ್ಯಖಂಡ ಅರಣ್ಯ ಪ್ರದೇಶದಲ್ಲಿ ಉಪ-ವಲಯ ಕಮಾಂಡರ್ನನ್ನು ಬಂಧಿಸಲಾಗಿತ್ತು. ಆತನ ತಲೆಗೆ ₹5 ಲಕ್ಷ ಇನಾಮು ಘೋಷಿಸಲಾಗಿತ್ತು.

ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಲಭಿಸಿದ ಮಾಹಿತಿಯಂತೆ ಇತರೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಡಿಐಜಿ (ಸೌತ್ ಚೋಟಾನಾಗ್ಪುರ ವಲಯ) ಅನೂಪ್ ಬಿರ್ತಾರೆ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅನೇಕ ಮಾವೋದಿಗಳ ಹತ್ಯೆ ಹಾಗೂ ಬಂಧನವಾಗಿದೆ ಎಂದು ಅವರು ತಿಳಿಸಿದ್ದಾರೆ.
.ಜಮ್ಮು–ಕಾಶ್ಮೀರ: ಭದ್ರತಾ ಪಡೆ – ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ.ಬೆಂಗಳೂರು | ಕಚೇರಿಯಲ್ಲಿ ₹10 ಲಕ್ಷ ಕಳವು: ಭದ್ರತಾ ಸಿಬ್ಬಂದಿ ಸೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.