ನವದೆಹಲಿ: ಕಳೆದ ಐದು ವರ್ಷಗಳಲ್ಲಿ ನೈಸರ್ಗಿಕ ಸೇರಿದ ವಿವಿಧ ಕಾರಣಗಳಿಂದ ವಿದೇಶಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಕೆನಡಾದಲ್ಲಿ ಅತಿ ಹೆಚ್ಚು ಅಂದರೆ 171 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಲೋಕಸಭೆಗೆ ಮಾಹಿತಿ ನೀಡಿದರು. ಅಮೆರಿಕದಲ್ಲಿ 108, ಬ್ರಿಟನ್ನಲ್ಲಿ 58, ಆಸ್ಟ್ರೇಲಿಯಾದಲ್ಲಿ 57 ಮತ್ತು ರಷ್ಯಾದಲ್ಲಿ 37, ಉಕ್ರೇನ್ನಲ್ಲಿ 18, ಜರ್ಮನಿಯಲ್ಲಿ 24, ಜಾರ್ಜಿಯಾ, ಕಿರ್ಗಿಸ್ತಾನ ಮತ್ತು ಸೈಪ್ರಸ್ನಲ್ಲಿ ತಲಾ 12 ಮತ್ತು ಚೀನಾದಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ದಾಳಿಗೆ 19 ಭಾರತೀಯ ವಿದ್ಯಾರ್ಥಿಗಳ ಸಾವು...

ಈ ಪೈಕಿ ವಿದೇಶಗಳಲ್ಲಿ ನಡೆದ ದಾಳಿಯಲ್ಲಿ ಒಟ್ಟು 19 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೆನಡಾದಲ್ಲಿಯೇ ಅತಿ ಹೆಚ್ಚು ದಾಳಿ ಪ್ರಕರಣಗಳು ವರದಿಯಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
.ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ 5 ಕೋಟಿಗೂ ಅಧಿಕ ಪ್ರಕರಣಗಳು.ಮಾನನಷ್ಟ ಮೊಕದ್ದಮೆ: ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.