ತಿರುವಾಂಕೂರಿನಲ್ಲಿ ವರದಕ್ಷಿಣೆ ಪದ್ಧತಿಯ ಪ್ರಾಬಲ್ಯವನ್ನು ಸಾಬೀತುಪಡಿಸಲು ಹೆಚ್ಚಿನ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲದ ಕಾರಣ ರಾಣಿಯ ಆಜ್ಞೆಯು ಗಮನಾರ್ಹವಾದುದು ಎಂದು ಹೆಸರಾಂತ ಇತಿಹಾಸಕಾರ ಟಿ.ಪಿ ಶಂಕರನ್‌ಕುಟ್ಟಿ ಹೇಳಿದ್ದಾರೆ. ಈ ಆದೇಶದಲ್ಲಿ , ಬ್ರಾಹ್ಮಣ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ವರದಕ್ಷಿಣೆ ಪದ್ಧತಿಯ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ ಮತ್ತು ಆದ್ದರಿಂದ ಇದನ್ನು ‘ಮಹತ್ವದ ದಾಖಲೆ' ಎಂದು ಪರಿಗಣಿಸಬಹುದು ಎಂದು ಅವರು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಕಾನೂನುಗಳನ್ನು ಅಂಗೀಕರಿಸಿದರೆ ಸಾಕಾಗುವುದಿಲ್ಲ. ಅವುಗಳ ಸಕಾರಾತ್ಮಕ ಪರಿಣಾಮಗಳನ್ನು ಒಪ್ಪಿಕೊಳ್ಳುವ ಮಾನಸಿಕ ಸ್ಥಿತಿ ಸಮಾಜದ ಜನರಲ್ಲಿ ಬರಬೇಕು