ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಭಾನುವಾರ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ 13 ರಾಷ್ಟ್ರಗಳಲ್ಲಿರುವ ಭಾರತೀಯರು ಪಾಲ್ಗೊಂಡಿದ್ದಾರೆ ಎಂದು ಎಎಪಿ ಹೇಳಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಎಎಪಿ, ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ನಾರ್ವೆ, ಐರ್ಲೆಂಡ್ ಹಾಗೂ ಇತರ ರಾಷ್ಟ್ರಗಳಲ್ಲಿ ಇರುವ ಭಾರತೀಯರು, 'ಸರ್ವಾಧಿಕಾರದ ವಿರುದ್ಧ ಧನಿ ಎತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗೆ ಅವರೆಲ್ಲ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದಾರೆ' ಎಂದು ಹೇಳಿದೆ.

'ದೆಹಲಿಯಂತೆಯೇ ದೇಶದ ಇತರ ಭಾಗಗಳಲ್ಲಿ ಹಾಗೂ ವಿದೇಶದಲ್ಲಿರುವ ಭಾರತೀಯರು, ಮಹಾತ್ಮ ಗಾಂಧಿ ಅವರ ನೆಚ್ಚಿನ 'ರಘುಪತಿ ರಾಘವ ರಾಜಾರಾಮ್' ಗೀತೆಯನ್ನು ಹಾಡುತ್ತಾ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಕೇಜ್ರಿವಾಲ್ ಅವರಿಗೆ ಶುಭ ಹಾರೈಸಿದ್ದಾರೆ. ಸತ್ಯಾಗ್ರಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ' ಎಂದೂ ತಿಳಿಸಿದೆ.
.ಸಂಚಿನಿಂದ ಕೇಜ್ರಿವಾಲ್ ಬಂಧನ: ಎಎಪಿ ಕಾರ್ಯಕರ್ತರ ಸಾಮೂಹಿಕ ಉಪವಾಸ ಸತ್ಯಾಗ್ರಹ.
ಎಎಪಿ ಪ್ರಕಾರ, ಅಮೆರಿಕದ ಬೋಸ್ಟನ್‌ನ ಹಾರ್ವರ್ಡ್ ಸ್ಕ್ವೇರ್, ಲಾಸ್ ಏಂಜಲೀಸ್‌ನ ಪರ್ವತದ ಮೇಲಿರುವ ಹಾಲಿವುಡ್ ಪಾಯಿಂಟ್, ಸ್ಯಾನ್ ಫ್ರಾನ್ಸಿಸ್ಕೊದ ಲೇಕ್ ಎಲಿಜಬೆತ್, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್, ದಲ್ಲಾಸ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕ, ವಾಷಿಂಗ್ಟನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೊರಗೆ, ಕೆನಡಾದ ಡೌನ್‌ಟೌನ್ ವ್ಯಾಂಕೋವರ್‌ನ ಹಾಲಂಡ್ ಪಾರ್ಕ್ ಹಾಗೂ ಟೊರೊಂಟೊದ ಬ್ರಾಂಪ್ಟನ್ ಸಿಟಿ ಹಾಲ್, ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಫೆಡರೇಷನ್ ಸ್ಕ್ವೇರ್, ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್, ಐರ್ಲೆಂಡ್‌ನ ಡಬ್ಲಿನ್, ಜರ್ಮನಿಯ ಬರ್ಲಿನ್, ನಾರ್ವೆಯ ಒಸ್ಲೊದಲ್ಲಿ ಹಾಗೂ ಇತರ ನಗರಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.