ನವದೆಹಲಿ: ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಭದ್ರತೆ ಬಗ್ಗೆ ಸಚಿವೆ ಅತಿಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
.ಕೇಜ್ರಿವಾಲ್ ಬಂಧನ: ಎಎಪಿ ಪ್ರಚಾರಕ್ಕೆ ಹಿನ್ನಡೆ?.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೆಹಲಿಯ ಮುಖ್ಯಮಂತ್ರಿಯಾಗಿರುವುದರಿಂದ ಕೇಜ್ರಿವಾಲ್ ಅವರಿಗೆ Z+ ಭದ್ರತೆ ಇದೆ. ಈಗ ಅವರ ಇ.ಡಿ ವಶದಲ್ಲಿ ಇದ್ದಾರೆ. ಅವರ ಸುರಕ್ಷತೆಯ ಹೊಣೆ ಯಾರಿಗೆ? ಇ.ಡಿ ಕಚೇರಿಯಲ್ಲಿ ಅವರ ಲಾಕ್‌ಅಪ್‌ಗೆ ಪ್ರವೇಶಿಸುವವರು ಯಾರೆಲ್ಲಾ? ಅವರಿಗೆ ನೀಡಲಾದ ಭದ್ರತೆ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು’ ಎಂದು ಅತಿಶಿ ಆಗ್ರಹಿಸಿದ್ದಾರೆ.

‘ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷದ ಮುಖ್ಯಸ್ಥರನ್ನು ಲೋಕಸಭೆ ಚುನಾವಣೆಗೂ ಮುನ್ನ ಬಂಧಿಸಲಾಗಿದೆ. ಕೇಜ್ರಿವಾಲ್ ವಿರುದ್ಧ ಒಂದೇ ಒಂದು ಸಾಕ್ಷಿಯನ್ನು ಹಾಜರುಪಡಿಸಲು ಇ.ಡಿಗೆ ಸಾಧ್ಯವಾಗಿಲ್ಲ. ಇದು ಬಿಜೆಪಿಗೆ ಕೇಜ್ರಿವಾಲ್ ಬಗ್ಗೆ ಇರುವ ಭಯವನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.
.ಕೇಜ್ರಿವಾಲ್ ಬಂಧನ: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಎಎಪಿ ಕರೆ.
‘ಅವರಿಗೆ ಸವಾಲು ಒಡ್ಡಬಲ್ಲ ನಾಯಕ ಕೇಜ್ರಿವಾಲ್ ಮಾತ್ರ ಎನ್ನುವುದು ಅವರಿಗೆ ತಿಳಿದಿದೆ. ಹೀಗಾಗಿ ಅವರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.
.ದೆಹಲಿ ಜಲ ಮಂಡಳಿ ಹಗರಣ: ಇ.ಡಿ ವಿಚಾರಣೆಗೆ ಹಾಜರಾಗದ ಅರವಿಂದ ಕೇಜ್ರಿವಾಲ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.