ಕೋಲ್ಕತ್ತ: ‘ಚುನಾವಣಾ ಬಾಂಡ್ ಅನ್ನು ಜಗತ್ತಿನ ಅತಿದೊಡ್ಡ ಹಗರಣ’ ಎಂದು ಕರೆದಿರುವ ಪ್ರಖ್ಯಾತ ಅರ್ಥಶಾಸ್ತ್ರಜ್ಞ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ ಅವರನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಶ್ಲಾಘಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ‘ಪರಕಾಲ ಪ್ರಭಾಕರ ಅವರು ಸತ್ಯವನ್ನೇ ಹೇಳಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನೇರ, ಪ್ರಾಮಾಣಿಕ ವ್ಯಕ್ತಿಗಳಿಗೆ ಮಾತ್ರ ಹೀಗೆ ಹೇಳಲು ಸಾಧ್ಯ. ಪ್ರಭಾಕರ ಅವರು ಹೊಗಳಿಕೆಗೆ ಅರ್ಹರು’ ಎಂದರು.

‘ಪ್ರಭಾಕರ ಅವರು ಹೇಳಿದ್ದನ್ನೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುತ್ತಾ ಬಂದಿದ್ದಾರೆ. ಚುನಾವಣಾ ಬಾಂಡ್ ಮಸೂದೆ ಅಂಗೀಕಾರವಾದ ದಿನವೇ ನಾವು(ಕಾಂಗ್ರೆಸ್) ಪ್ರತಿಭಟನೆ ಮಾಡಿದ್ದೆವು. ಚುನಾವಣಾ ಬಾಂಡ್‌ಗಳು ಹಣ ಸುಲಿಗೆ ಮಾಡುವ ವ್ಯವಸ್ಥಿತ ಮಾರ್ಗವಾಗಲಿದೆ ಎಂದು ಆಗಲೇ ನಾವು ಎಚ್ಚರಿಸಿದ್ದೆವು’ ಎಂದು ಹೇಳಿದ್ದಾರೆ.

ಸುದ್ದಿ ವಾಹಿನಿಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿದ ಪರಕಾಲ ಪ್ರಭಾಕರ್ ಅವರು, ‘ಚುನಾವಣಾ ಬಾಂಡ್ ಹಗರಣವು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೇ ಅತಿ ದೊಡ್ಡ ಹಗರಣವಾಗಿದೆ. ಚುನಾವಣಾ ಬಾಂಡ್ ಹಗರಣದ ಕಾರಣದಿಂದ ಈ ಬಾರಿಯ ಚುನಾವಣೆ ಎರಡು ಮೈತ್ರಿಗಳ(ಎನ್‌ಡಿಎ ಮತ್ತು ಇಂಡಿಯಾ) ನಡುವಿನ ಹೋರಾಟವಲ್ಲ, ಬಿಜೆಪಿ ಮತ್ತು ಜನರ ನಡುವಿನ ಹೋರಾಟ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.