ಬೆಂಗಳೂರು: ಸೂರ್ಯನ ಅಧ್ಯಯನ ಉದ್ದೇಶದ ಭಾರತದ ‘ಆದಿತ್ಯ –ಎಲ್1’ ಉಪಗ್ರಹದಲ್ಲಿ ಅಳವಡಿಸಿರುವ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್ಪೆರಿಮೆಂಟ್ (ಎಎಸ್ಪಿಇಎಕ್ಸ್) ಪೇಲೋಡ್ ತನ್ನ ಕಾರ್ಯ ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶನಿವಾರ ಪ್ರಕಟಿಸಿದೆ.

ಸೂರ್ಯನಿಂದ ಬಾಹ್ಯಾಕಾಶಕ್ಕೆ ಹೊಮ್ಮುವ ಸೋಲಾರ್ ವಾಯು ಕಣಗಳ ಅಧ್ಯಯನ ಇದರ ಕಾರ್ಯಭಾರವಾಗಿದೆ. ಈ ಪೇಲೋಡ್ನಲ್ಲಿ ಸೋಲಾರ್ ವಿಂಡ್ ಇಯಾನ್ ಸ್ಪೆಕ್ಟ್ರೊಮೀಟರ್ (ಎಸ್ಡಬ್ಲ್ಯುಐಎಸ್), ಸುಪ್ರ ಥರ್ಮಲ್ ಅಂಡ್ ಎನರ್ಜಿಟಿಕ್ ಪಾರರ್ಟಿಕಲ್ ಸ್ಪೆಕ್ಟ್ರೊಮೀಟರ್ (ಸ್ಟೆಪ್ಸ್) ಹೆಸರಿನ ಉಪಕರಣಗಳನ್ನು ಅಳವಡಿಸಿದೆ.

ಸ್ಟೆಪ್ಸ್ ಅನ್ನು ಸೆ.10ರಂದು ಚಾಲನೆಗೊಳಿಸಿದ್ದು, ಎರಡನೇ ಉಪಕರಣವನ್ನು ನ.2ರಂದು ಚಾಲನೆಗೊಳಿಸಿದೆ. ಎಸ್ಡಬ್ಲ್ಯುಐಎಸ್ ಉಪಕರಣದಲ್ಲಿ ಎರಡು ಸೆನ್ಸರ್ ಘಟಕಗಳಿವೆ. ಸೂರ್ಯನಿಂದ ಹೊಮ್ಮುವ ವಾಯುವಿನಲ್ಲಿನ ಪ್ರೊಟಾನ್, ಆಲ್ಫಾ ಕಣಗಳನ್ನು ಯಶಸ್ವಿಯಾಗಿ ಅಂದಾಜು ಮಾಡಿದೆ ಎಂದು ಇಸ್ರೊ ತಿಳಿಸಿದೆ.

ಆದಿತ್ಯ–ಎಲ್1 ಅನ್ನು ಸೆ.2ರಂದು ಉಡಾವಣೆ ಮಾಡಲಾಗಿತ್ತು. ಜನವರಿ 7ರ ವೇಳೆಗೆ ಇದನ್ನು ಸೂರ್ಯ–ಭೂಮಿ ನಡುವಣ ಮೊದಲ ಲಗ್ರಾಂಜಿಯನ್ ಪಾಯಿಂಟ್ಗೆ (ಎಲ್1) ಸೇರಿಸುವ ಗುರಿಯಿದೆ. ಎಲ್1 ಭೂಮಿಯಿಂದ ಅಂದಾಜು 15 ಲಕ್ಷ ಕಿ.ಮೀ. ದೂರದಲ್ಲಿದ್ದು, ಅಧ್ಯಯನಕ್ಕೆ ಸೂಕ್ತ ತಾಣ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.