ಜಮ್ಮು: ವಾರ್ಷಿಕ ಅಮರನಾಥ ಯಾತ್ರೆಗೆ ಸೋಮವಾರ ಮುಂಗಡ ನೋಂದಣಿ ಆರಂಭವಾಗಿದೆ.

ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ ತೆರಳುವ 52 ದಿನಗಳ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ ಎಂದು ಅಮರನಾಥ ಶ್ರೈನ್ ಬೋರ್ಡ್ (ಎಸ್‌ಎಎಸ್‌ಬಿ) ಪ್ರಕಟಣೆ ತಿಳಿಸಿದೆ.

ಅಮರನಾಥ ಯಾತ್ರೆಯ ಪ್ರಯಾಣವನ್ನು ಎರಡು ಮಾರ್ಗಗಳ ಮೂಲಕ ಕೈಗೊಳ್ಳಬಹುದು. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್ ಮೂಲಕ 48-ಕಿಮೀ ಮಾರ್ಗದಲ್ಲಿ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯಿಂದ ಬಾಲ್ಟಾಲ್ ಮೂಲಕ 14 ಕಿಮೀ ಮಾರ್ಗದಲ್ಲಿ ತೆರಳಬಹುದು. ಆದರೆ ಈ ಮಾರ್ಗ ಕಡಿದಾದ ಹಾದಿಯನ್ನು ಹೊಂದಿದೆ ಎಂದು ಎಸ್‌ಎಎಸ್‌ಬಿ ಹೇಳಿದೆ.

‘ಮುಂಗಡ ನೋಂದಣಿ ಇಂದು ಜಮ್ಮುವಿನ ಬ್ಯಾಂಕ್ ಶಾಖೆಗಳಲ್ಲಿ ಆರಂಭವಾಗಿದೆ. ದೇಶಾದ್ಯಂತ ಪಿಎನ್‌ಬಿಯ (ಪಂಜಾಬ್ ನ್ಯಾಷನಲ್ ಬ್ಯಾಂಕ್) 540 ಶಾಖೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾತ್ರೆಗೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 75 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಆರು ವಾರ ತುಂಬಿದ ಗರ್ಭಿಣಿಯರು ನೋಂದಣಿ ಮಾಡಿಕೊಳ್ಳುವಂತಿಲ್ಲ ಎಂದು ಬೋರ್ಡ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.