ನವದೆಹಲಿ: ‘ವಾಯು ಸೇನೆಯ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ನೇಮಕಗೊಂಡಿದ್ದಾರೆ. ಹಾಲಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಇದೇ ಸೆ. 30ರಂದು ನಿವೃತ್ತರಾಗಲಿದ್ದು, ಅವರಿಂದ ಸಿಂಗ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಅಮರ್ ಪ್ರೀತ್ ಸಿಂಗ್ ಅವರು 5 ಸಾವಿರ ಗಂಟೆಗೂ ಹೆಚ್ಚು ಕಾಲ ಯುದ್ಧ ವಿಮಾನ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ. ಸದ್ಯ ಇವರು ವಾಯು ಸೇನೆಯ ಉಪ ಮುಖ್ಯಸ್ಥರಾಗಿದ್ದಾರೆ.

‘ಏರ್ ಮಾರ್ಷಲ್ ಅಮರ್ ಪ್ರೀತಿ ಸಿಂಗ್ ಅವರು ಪಿವಿಎಸ್‌ಎಂ, ಎವಿಎಸ್ಎಂ ಹಾಗೂ ವಾಯು ಸೇನೆಯಲ್ಲಿ ಸದ್ಯ ಉಪ ಮುಖ್ಯಸ್ಥರನ್ನಾಗಿ ಸರ್ಕಾರ ಈವರೆಗೂ ನಿಯೋಜಿಸಿದೆ. ಸೆ. 30ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಏರ್ ಮಾರ್ಷಲ್ ಸಿಂಗ್ ಅವರು ವಾಯು ಸೇನೆಯ ಮುಖ್ಯಸ್ಥರಾಗಲಿದ್ದಾರೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.