ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ವರ್ಚುವಲ್ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಕುಳಿತುಕೊಂಡ ಜಾಗದ ಹಿಂಭಾಗದಲ್ಲಿ ಭಾರತದ ಗಡಿಪ್ರದೇಶಗಳನ್ನು ಒಳಗೊಂಡಿರುವ ಪಾಕ್ ಭೂಪಟ ಪ್ರದರ್ಶಿಸಿದ್ದನ್ನು ಖಂಡಿಸಿ ಭಾರತ ಸಭೆಯಿಂದ ಹೊರ ನಡೆದಿದೆ.

ಭಾರತದ ರಾಷ್ಟ್ರೀಯ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಇತರ ಎಸ್ಸಿಒ ರಾಷ್ಟ್ರಗಳ ಏಳು ಪ್ರತಿನಿಧಿಗಳು ಪಾಕ್ ವಿರುದ್ಧ ಪ್ರತಿಭಟಿಸಿ ಮಂಗಳವಾರ ನಡೆದ ವಿಡಿಯೊ ಕಾನ್ಫರೆನ್ಸ್ನಿಂದ ನಿರ್ಗಮಿಸಿದ್ದಾರೆ.

ಪಾಕಿಸ್ತಾನದ ಪ್ರತಿನಿಧಿ ಮೊಯೀದ್ ಯೂಸಫ್ ಅವರು ಸಭೆಗೆ ಹಾಜರಾದಾಗ ಅವರ ಆಸನದಹಿಂದೆಭಾರತದ ಗಡಿಭಾಗಗಳಿರುವ ಪಾಕ್ ಭೂಪಟ ಕಾಣಿಸಿತ್ತು.ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಗುಜರಾತಿನ ಜುನಾಗಢ್ ಪ್ರದೇಶವನ್ನು ಸೇರಿಸಿದ ಪಾಕ್ ಭೂಪಟ ಅದಾಗಿತ್ತು. ಈ ಹಿಂದೆ ಭಾರತದ ಗಡಿಭಾಗಗಳನ್ನು ಸೇರಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಭೂಪಟವೊಂದನ್ನು ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ:ಜಮ್ಮು ಕಾಶ್ಮೀರ, ಗುಜರಾತಿನ ಭೂಭಾಗವಿರುವ ಪಾಕ್ ಭೂಪಟ ಟ್ವೀಟಿಸಿದ ಇಮ್ರಾನ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.