ನವದೆಹಲಿ: ವಿಮಾನ ನಿಲ್ದಾಣಗಳು, ಮೆಟ್ರೊ ನಿಲ್ದಾಣಗಳು ಸೇರಿದಂತೆ ರಾಷ್ಟ್ರದ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವ ಮತ್ತು ವಿಐಪಿಗಳಿಗೆ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್ಗೆ ವಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಮಹಿಳಾ ಬೆಟಾಲಿಯನ್ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿರುವ ಮೊಟ್ಟಮೊದಲ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಈ ನಿರ್ಧಾರವು ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ಭಾಗವಹಿಸುವ ಹೆಚ್ಚಿನ ಮಹಿಳೆಯರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ವಿಮಾನ ನಿಲ್ದಾಣಗಳು ಹಾಗೂ ಇತರೆ ಪ್ರಮುಖ ಸಂಸ್ಥೆಗಳ ಬಳಿ ಸಿಐಎಸ್ಎಫ್ನ ಕಾರ್ಯಭಾರ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಲಿ ಇರುವ ಎರಡು ಲಕ್ಷ ಸಿಬ್ಬಂದಿಯಲ್ಲಿ ಆಯ್ಕೆ ಮಾಡಿ ಹೊಸದಾಗಿ ಮಂಜೂರಾದ ತುಕಡಿ ರಚಿಸಲಿದ್ದು, ಹಿರಿಯ ಕಮಾಂಡೆಂಟ್ ದರ್ಜೆಯ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪ್ರಸ್ತುತ 12 ಮೀಸಲು ತುಕಡಿಗಳಿವೆ. 1.80 ಲಕ್ಷ ಸಿಬ್ಬಂದಿ ಪೈಕಿ ಶೇ 7ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ.
.PHOTOS | CISFಗೆ ಇದೇ ಮೊದಲ ಬಾರಿಗೆ ಮಹಿಳಾ ಬೆಟಾಲಿಯನ್ ಮಂಜೂರು ಮಾಡಿದ ಕೇಂದ್ರ.ಸಿಐಎಸ್ಎಫ್ಗೆ 1,025 ಸಿಬ್ಬಂದಿಯ ಮಹಿಳಾ ಬೆಟಾಲಿಯನ್ ಮಂಜೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.