ನವದೆಹಲಿ: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಗಾಗಿ ಅಮ್ನೆಸ್ಟಿ ಇಂಡಿಯಾ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ಗೆ (ಎಐಐಪಿಎಲ್) ₹ 51.72 ಕೋಟಿ ಹಾಗೂ ಸಂಸ್ಥೆಯ ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ₹ 10 ಕೋಟಿ ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹೇಳಿದೆ.

ಬ್ರಿಟನ್ ಮೂಲದ ಅಮ್ನೆಸ್ಟಿ ಇಂಟರ್ನ್ಯಾಷನಲ್, ಭಾರತದಲ್ಲಿನ ತನ್ನ ಅಂಗಸಂಸ್ಥೆಗಳ ಮೂಲಕ ವಿದೇಶಿ ನೇರ ಹೂಡಿಕೆ (ಎಫ್ಡಿಎ) ಮಾರ್ಗದಲ್ಲಿ ಭಾರಿ ಮೊತ್ತದ ದೇಣಿಗೆಗಳನ್ನು ನೀಡುತ್ತಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಿಂದ (ಎಫ್ಸಿಆರ್ಎ) ತಪ್ಪಿಸಿಕೊಳ್ಳಲು ಸಂಸ್ಥೆಯು ಈ ರೀತಿ ಮಾಡುತ್ತಿದ್ದುದು ಪತ್ತೆಯಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದೂ ಇ.ಡಿ ತಿಳಿಸಿದೆ.

ಎಫ್ಸಿಆರ್ಎ ಅಡಿ ಅನುಮತಿ ಪಡೆಯದೆಯೇ, ಭಾರತದಲ್ಲಿನ ತನ್ನ ಕೆಲ ಸಂಸ್ಥೆಗಳಿಗೆಅಮ್ನೆಸ್ಟಿ ಇಂಟರ್ನ್ಯಾಷನಲ್ ಹಣ ವರ್ಗಾವಣೆ ಮಾಡಿದೆ. ದೇಶದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಈ ಹಣವನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಎಫ್ಸಿಆರ್ಎ ಅಡಿ ವಿದೇಶಿ ದೇಣಿಗೆಗಳನ್ನು ಸಂಗ್ರಹಿಸುವುದಕ್ಕಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಫೌಂಡೇಷನ್ ಟ್ರಸ್ಟ್ (ಎಐಐಎಫ್ಟಿ) ಹಾಗೂ ಇತರ ಟ್ರಸ್ಟ್ಗಳಿಗೆ ಗೃಹ ಸಚಿವಾಲಯ ಪೂರ್ವಾನುಮತಿ ನೀಡಿರಲಿಲ್ಲ ಎಂದು ಇ.ಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.