ಅಮರಾವತಿ: ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ‘ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ’ (ಸಿಆರ್ಡಿಎ) ಯೋಜನೆಯ ಕಾಮಗಾರಿಗಳನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶನಿವಾರ ಪುನರಾರಂಭಿಸಿದ್ದಾರೆ.
.ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ.
ಈ ಹಿಂದಿನ ವೈ.ಎಸ್.ಆರ್. ಕಾಂಗ್ರೆಸ್ ಸರ್ಕಾರವು, ಅಮರಾವತಿಯನ್ನು ರಾಜಧಾನಿಯನ್ನಾಗಿ ನಿರ್ಮಾಣ ಮಾಡುವ ಅವರ 'ಕನಸಿನ ಯೋಜನೆ'ಯನ್ನು ಸ್ಥಗಿತಗೊಳಿಸಿತ್ತು. ಇದೀಗ ಐದು ವರ್ಷಗಳ ಬಳಿಕ ರಾಜಧಾನಿ ಪ್ರದೇಶದ ರಾಯಪುಡಿ ಗ್ರಾಮದಲ್ಲಿ ಕಾಮಗಾರಿಗಳನ್ನು ಪುನರಾರಂಭಿಸಲಾಗಿದೆ.

2014-2019ರ ತಮ್ಮ ಹಿಂದಿನ ಅವಧಿಯಲ್ಲಿ ₹160 ಕೋಟಿ ವೆಚ್ಚದಲ್ಲಿ 7 ಅಂತಸ್ತಿನ ಕಚೇರಿ ಕಟ್ಟಡವನ್ನು ಸಿಆರ್ಡಿಎ ಯೋಜನೆಯಡಿ ಪ್ರಾರಂಭಿಸಿದ್ದರು. ಆದರೆ, 2019 ಮತ್ತು 2024ರ ನಡುವೆ, ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರವು ಮೂರು ರಾಜಧಾನಿ ಮಾಡುವುದಾಗಿ ಹೇಳಿ ಅಮರಾವತಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರಲಿಲ್ಲ.
.ತಿರುಪತಿ ಲಾಡು ಗುಣಮಟ್ಟದ ಬಗ್ಗೆ ಭಕ್ತರ ಶ್ಲಾಘನೆ: ಚಂದ್ರಬಾಬು ನಾಯ್ಡು .
2024ರ ಚುನಾವಣೆಯ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ನಾಯ್ಡು ಎರಡನೇ ಬಾರಿ ಅಧಿಕಾರ ವಹಿಸಿಕೊಂಡರು. ಬಳಿಕ, ಅಮರಾವತಿ ರಾಜಧಾನಿ ಯೋಜನೆಗೆ ಹೊಸ ಉತ್ತೇಜನ ದೊರೆಯಿತು.

ಅಕ್ಟೋಬರ್ 16 ರಂದು ನಡೆದ ಸಿಆರ್ಡಿಎ ಅಧಿಕಾರಿಗಳ ಸಭೆಯಲ್ಲಿ ಅಮರಾವತಿಯಲ್ಲಿ ಕಾಮಗಾರಿಗಳನ್ನು ಮರುಪ್ರಾರಂಭಿಸುವ ನಿರ್ಣಯ ಕೈಗೊಳ್ಳಲಾಗಿದೆ.
.ಲಡ್ಡು ವಿವಾದ: ನಾಯ್ಡು ‘ಪಾಪ’ಕ್ಕೆ YSRCP ಕಾರ್ಯಕರ್ತರಿಂದ ‘ಪ್ರಾಯಶ್ಚಿತ್ತ’ ಕಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.