ಅಮರಾವತಿ: ಆಂಧ್ರಪ್ರದೇಶದ 6 ಲೋಕಸಭಾ ಕ್ಷೇತ್ರಗಳು ಹಾಗೂ 12 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರಗಳನ್ನು ಕಾಂಗ್ರೆಸ್ ಘೋಷಿಸಿದೆ.

ತಿರುಪತಿಯ ಮಾಜಿ ಸಂಸದ ಸಿ. ಮೋಹನ್ ಮತ್ತೆ ಅದೇ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ನೆಲ್ಲೂರು ಕ್ಷೇತ್ರದಿಂದ ಕೆ.ರಾಜು ಸ್ಪರ್ಧಿಸಲಿದ್ದಾರೆ.
.ಪತ್ನಿ, ಆಪ್ತ ಕಾರ್ಯದರ್ಶಿಯನ್ನು ಜೈಲಿನಲ್ಲಿ ಭೇಟಿಯಾದ ಅರವಿಂದ ಕೇಜ್ರಿವಾಲ್.ಜಾರ್ಖಂಡ್: 6 ತಾಸು ಕಾಂಗ್ರೆಸ್ ಶಾಸಕಿಯ ವಿಚಾರಣೆ; ಇಂದು ಹಾಜರಾಗಲು ಇ.ಡಿ ಸೂಚನೆ.
ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪಿ. ಸತ್ಯನಾರಾಯಣರೆಡ್ಡಿ , ವಿ ವೆಂಕಟೇಶ್ (ಅನಕಾಪಲ್ಲಿ), ಕೆ. ಲಾವಣ್ಯ (ಏಲೂರು) ಮತ್ತು ಜಿ. ಅಲೆಕ್ಸಾಂಡರ್ ಸುಧಾಕರ್ (ನರಸರಾವ್‌ಪೇಟೆ) ಅಭ್ಯರ್ಥಿಯಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ಬುಧವಾರ ತಿಳಿಸಿದ್ದಾರೆ.

12 ವಿಧಾನಸಭಾ ಅಭ್ಯರ್ಥಿಗಳ ಪೈಕಿ ಇತ್ತೀಚೆಗೆ ವೈಎಸ್‌ಆರ್‌ಸಿಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕೆ. ಕೃಪಾರಾಣಿ ಹಾಗೂ ಎಂ.ಎಸ್ ಬಾಬು ಅವರಿಗೆ ಟಿಕೆಟ್ ನೀಡಲಾಗಿದೆ.
.ಹೇಮಾ ಮಾಲಿನಿಗೆ ಅವಮಾನ ಆರೋಪ: ಸುರ್ಜೆವಾಲಾ, ಖರ್ಗೆಗೆ ಚುನಾವಣಾ ಆಯೋಗ ನೋಟಿಸ್.ಛತ್ತೀಸಗಢ | ಗಣಿಗಾರಿಕೆ ಗುಂಡಿಗೆ ಬಸ್ ಉರುಳಿ 12 ಸಾವು, 14 ಮಂದಿಗೆ ಗಾಯ.
ಈ ಹಿಂದೆ 5 ಲೋಕಸಭಾ ಕ್ಷೇತ್ರ ಹಾಗೂ 114 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಘೋಷಿಸಿತ್ತು. ಒಂದು ಲೋಕಸಭೆ ಹಾಗೂ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಐ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.

ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.