ಅಮರಾವತಿ: ಆಂಧ್ರಪ್ರದೇಶ ಕೌಶಲ ಅಭಿವೃದ್ಧಿ ನಿಗಮದ ಹಣಕಾಸು ಹಗರಣದ ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.

ಕೌಶಲ ಅಭಿವೃದ್ಧಿ ನಿಗಮದ ಹಣಕಾಸು ಹಗರಣದ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಸಿಐಡಿ ಶನಿವಾರ ಸೆಪ್ಟೆಂಬರ್ 9 ರಂದು ಬಂಧಿಸಿ ರಾಜಮಂಡ್ರಿ ಜೈಲಿಗೆ ರವಾನಿಸಿತ್ತು.

‘ನಾಯ್ಡು ಸಿಎಂ ಆಗಿದ್ದಾಗ ಆಂಧ್ರಪ್ರದೇಶದಾದ್ಯಂತ ಕೌಶಲ ಕೇಂದ್ರಗಳನ್ನು ತೆರೆಯುವಲ್ಲಿ ನಿಗಮಕ್ಕೆ ಬಿಡುಗಡೆಯಾಗಿದ್ದ ಸುಮಾರು ₹3,300 ಕೋಟಿ ಹಣದಲ್ಲಿ ನಾಯ್ಡು ಅವರಿಂದ ಸರ್ಕಾರಕ್ಕೆ ₹370ಕೋಟಿ ವಂಚನೆ ಆಗಿದೆ’ ಎಂಬ ಆರೋಪದ ಮೇಲೆ ಸಿಐಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ನಾಯ್ಡು 3ನೇ ಆರೋಪಿಯಾಗಿದ್ದಾರೆ.

ನಾಯ್ಡು ಅವರು ನವೆಂಬರ್ 28ರವರೆಗೆ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.