ಗುವಾಹಟಿ: ನಿಷೇಧಿತ ಯುಎಲ್ಎಫ್ಎ ಬಂಡುಕೋರರ ವಿರುದ್ಧ ಅಸ್ಸಾಂ ಪೊಲೀಸರು ಭಾನುವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ.

ಕಾಮರೂಪ್ ಜಿಲ್ಲೆಯಲ್ಲಿ ಶಂಕಿತ ಯುಎಲ್ಎಫ್ಎ ಕಾರ್ಯಕರ್ತ ಪ್ರಾಂಜಲ್ ದಾಸ್ ಎಂಬವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾವ ಸಂದರ್ಭದಲ್ಲಿ ಯುವಕನೆಡೆಗೆ ಗುಂಡು ಹಾರಿಸಲಾಯಿತು ಎಂದು ಅವರು ತಿಳಿಸಿಲ್ಲ.

ಈ ಮಧ್ಯೆ, ‘ದಾಸ್ ಸೇರಿದಂತೆ ನಾಲ್ವರು ಯುವಕರು ಪೊಲೀಸರ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಅವರಿಗೂ ಗುಂಪಿಗೂ ಯಾವುದೇ ನಂಟು ಇಲ್ಲ ’ ಎಂದು ಯುಎಲ್ಎಫ್ಎ–1 ಹೇಳಿಕೆ ಬಿಡುಗಡೆ ಮಾಡಿದೆ.

ಹೊಸದಾಗಿ ಸಂಘರ್ಷ:

ಈ ಮಧ್ಯೆ ಅಸ್ಸಾಂ ಡಿಜಿಪಿ ಜಿ.ಪಿ.ಸಿಂಗ್ ಮತ್ತು ಯುಎಲ್ಎಫ್ಎ ಮಧ್ಯೆ ಹೊಸದಾಗಿ ಸಂಘರ್ಷ ಆರಂಭವಾಗಿದೆ. ಸೋಮವಾರ ಸಿಂಗ್ ಅವರು, ‘ಬಿಕ್ಕಟ್ಟು ಪರಿಹಾರ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆಯು ನಿಷೇಧಿತ ಗುಂಪಿನೊಂದಿಗೆ ಮಾತುಕತೆಗೆ ಮುಂದಾಗುತ್ತಿದೆ. ಆದರೆ, ಇದನ್ನೇ ದೌರ್ಬಲ್ಯ ಎಂದು ಭಾವಿಸಿ ಹಿಂಸಾಚಾರ ನಡೆಸಲಾಗುತ್ತಿದೆ. ಈಗಲೂ ಶಾಂತಿಯುವಾಗಿಯೇ ಸಮಸ್ಯೆ ಪರಿಹಾರವಾಗಬೇಕೆಂದು ಬಯಸುತ್ತೇವೆ. ನಿಷೇಧಿತ ಗುಂಪು ಹಿಂಸಾಚಾರ ಮುಂದುವರಿಸಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ‘ಎಕ್ಸ್’ನಲ್ಲಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.