ಶ್ರೀನಗರ: ‘ಸಂವಿಧಾನದ ವಿಧಿ 370 ಮತ್ತು ಭಯೋತ್ಪಾದನೆ ಎರಡೂ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಮತ್ತೆ ಮರಳುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಇಲ್ಲಿ ಪ್ರತಿಪಾದಿಸಿದರು.

ಜಮ್ಮುವಿನ ಕಿಸ್ತವಾರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ (ಎನ್‌ಸಿ) ಮೈತ್ರಿ ಎಂದಿಗೂ ಭಯೋತ್ಪಾದನೆಗೇ ನೆಲೆ ಆಗಲಿದೆ ಮತ್ತು ಪ್ರತ್ಯೇಕತೆಗೆ ಒತ್ತು ನೀಡಲಿದೆ’ ಎಂದು ಟೀಕಿಸಿದರು. ‘ಜಮ್ಮು ಮತ್ತು ಕಾಶ್ಮಿರದಲ್ಲಿ ಇನ್ನು ವಿಧಿ 370ಕ್ಕೆ ಅವಕಾಶವಿಲ್ಲ. ಅದೀಗ ಇತಿಹಾಸ. ಇಲ್ಲಿ ಫಾರೂಕ್ ಅಬ್ದುಲ್ಲಾ ಅಥವಾ ರಾಹುಲ್ ಗಾಂಧಿ ಸರ್ಕಾರ ರಚಿಸುವುದಿಲ್ಲ‘ ಎಂದು ಶಾ ಹೇಳಿದರು.

‘ಎನ್‌ಸಿ ಮತ್ತು ಕಾಂಗ್ರೆಸ್ ತಮ್ಮ ಪ್ರಣಾಳಿಕೆಗಳಲ್ಲಿ ಭಯೋತ್ಪಾದಕರ ಬಿಡುಗಡೆ ಉಲ್ಲೇಖಿಸಿವೆ. ಇದು, ಭಯೋತ್ಪಾದನೆಗೆ ಅವಕಾಶ ಕಲ್ಪಿಸುವ ಯತ್ನ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದಕ್ಕೆ ಎಂದಿಗೂ ಅವಕಾಶವನ್ನು ನೀಡುವುದಿಲ್ಲ’ ಎಂದು ಶಾ ಹೇಳಿದರು.

ಸಮಾಜ ವಿರೋಧಿ ಶಕ್ತಿಗಳು ಕಣಿವೆ ರಾಜ್ಯದಲ್ಲಿ 1990ರ ಪರಿಸ್ಥಿತಿ ಸ್ಥಾಪಿಸಲು ಬಯಸುತ್ತಿವೆ. ಆದರೆ, ಕೇಂದ್ರ ಇಲ್ಲಿ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಅಧಿಕಾರಕ್ಕೆ ಬಂದರೆ ವಿಧಿ 370 ಮರುಸ್ಥಾಪಿಸುವ ಕುರಿತ ಎನ್‌ಸಿ, ಕಾಂಗ್ರೆಸ್ ಭರವಸೆ ಉಲ್ಲೇಖಿಸಿ, ‘ಇದರಿಂದ ಈಗ ಇಲ್ಲಿ ಮೀಸಲು ಸೌಲಭ್ಯ ಪಡೆಯುತ್ತಿರುವ ಜನರಿಗೆ ಮುಖ್ಯವಾಗಿ ಪಹರಿ, ಗುರ್ಜಾರ್ ಸಮುದಾಯಗಳಿಗೆ ಅನುಕೂಲವಾಗಲಿದೆಯೇ’ ಎಂದು ಪ್ರಶ್ನಿಸಿದರು.

‘1990ರಲ್ಲಿ ಕಾಶ್ಮೀರಿ ಪಂಡಿತ ವಲಸೆಗೆ ಎನ್‌ಸಿ ಮತ್ತು ಕಾಂಗ್ರೆಸ್ ಕಾರಣ ಎಂದು ನೇರವಾಗಿ ಆರೋಪಿಸಿದ ಅವರು, ಕಾಶ್ಮೀರದಲ್ಲಿ ಹಿಂಸಾಚಾರದ ಪರಿಸ್ಥಿತಿ ಅತಿಯಾಗಿದ್ದಾಗ ಇಲ್ಲಿ ಅವರ ಗೈರುಹಾಜರಿ ಇತ್ತು. ಆಗ ಲಂಡನ್‌ನ ಕಡಲತೀರಗಳಲ್ಲಿ ಖುಷಿಯಾಗಿದ್ದರು’ ಎಂದು ಟೀಕಿಸಿದರು.

ಇಬ್ಬರು ಪ್ರಧಾನಮಂತ್ರಿ ಎರಡು ಸಂವಿಧಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಧ್ವಜ ಇರಲು ಸಾಧ್ಯವೇ ಇಲ್ಲ. ಇರುವುದು ಒಂದೇ ಧ್ವಜ ಅದು ತ್ರಿವರ್ಣ ಧ್ವಜ
ಅಮಿತ್ ಶಾ ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.