ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ನಿವಾಸ ತೊರೆದ ಅರವಿಂದ ಕೇಜ್ರಿವಾಲ್: AAP ಸಂಸದರ ಮನೆಗೆ ಶಿಫ್ಟ್

Published : 4 ಅಕ್ಟೋಬರ್ 2024, 6:44 IST
Last Updated : 4 ಅಕ್ಟೋಬರ್ 2024, 6:44 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಫ್ಲ್ಯಾಗ್ ಸ್ಟಾಪ್ ರಸ್ತೆಯಲ್ಲಿದ್ದ ‘ಮುಖ್ಯಮಂತ್ರಿ ನಿವಾಸ’ವನ್ನು ಶುಕ್ರವಾರ ತೊರೆದಿದ್ದಾರೆ.

ಪೋಷಕರು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅವರು ಮನೆಯಿಂದ ಕಾರಿನಲ್ಲಿ ನಿರ್ಗಮಿಸಿದ್ದಾರೆ.

ಲುಟಿಯನ್ಸ್ ದೆಹಲಿಯ ಮಂಡಿ ಹೌಸ್‌ ಸಮೀಪದ ಫಿರೋಜ್‌ ಶಾ ರಸ್ತೆಯಲ್ಲಿರುವ ಎಎಪಿಯ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ಅವರು ತೆರಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಇ.ಡಿ ಹಾಗೂ ಸಿಬಿಐನಿಂದ ಬಂಧಿನಕ್ಕೊಳಗಾಗಿದ್ದ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿನಿಂದ ಬಂದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಮುಂದಿನ ಚುನಾವಣೆಯಲ್ಲಿ ಮತದಾರರಿಂದ ‘ಪ್ರಾಮಾಣಿಕತೆಯ ಸರ್ಟಿಫಿಕೆಟ್‌’ ಸಿಗುವವರೆಗೂ ಮುಖ್ಯಮಂತ್ರಿ ಸ್ಥಾನ ಏರುವುದಿಲ್ಲ ಎಂದು ಹೇಳಿದ್ದರು.

ನವರಾತ್ರಿ ವೇಳೆಯಲ್ಲಿ ಮುಖ್ಯಮಂತ್ರಿ ನಿವಾಸವನ್ನು ತೊರೆಯುವುದಾಗಿ ಹೇಳಿದ್ದರು. ಗುರುವಾರದಿಂದ ನವರಾತ್ರಿ ಆಚರಣೆ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT