ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸಮತ ‘ಪರೀಕ್ಷೆ’ಯಲ್ಲಿ ಗೆಲುವು ಸಾಧಿಸಿದ್ದಾರೆ.

ವಿಶ್ವಾಸಮತ ಪ್ರಕ್ರಿಯೆ ವೇಳೆ ಒಟ್ಟು 62 ಶಾಸಕರು ಸದನದಲ್ಲಿ ಹಾಜರಿದ್ದರು. ಸರ್ಕಾರದ ಪರವಾಗಿ 54 ಮತಗಳು ಬಿದ್ದವು.

‘ಎಎಪಿಯ ಯಾವ ಶಾಸಕರೂ ಅನರ್ಹರಾಗಿಲ್ಲ. ಇಬ್ಬರು ಜೈಲಿನಲ್ಲಿದ್ದಾರೆ. ಕೆಲವರಿಗೆ ಅನಾರೋಗ್ಯ ಇದೆ. ಇನ್ನು ಕೆಲವರು ದೆಹಲಿಯಿಂದ ಹೊರಗೆ ಇದ್ದಾರೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
.ಹಣ ಅಕ್ರಮ ವರ್ಗಾವಣೆ ಪ್ರಕರಣ: ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾದ ಕೇಜ್ರಿವಾಲ್.
ವಿಧಾನಸಭೆಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್, ‘ನಮ್ಮ ಶಾಸಕರಿಗೆ ಆಮಿಷ ಒಡ್ಡಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ವಿಶ್ವಾಸಮತ ಪ್ರಸ್ತಾವನೆಯನ್ನು ಮಂಡಿಸಬೇಕಾಯಿತು’ ಎಂದು ಹೇಳಿದರು.

‘ಹಲವು ಶಾಸಕರನ್ನು ಬಿಜೆಪಿಯವರು ಭೇಟಿಯಾಗಿ ಪಥ ಬದಲಿಸುವಂತೆ ಆಮಿಷ ಒಡ್ಡಿದ್ದರು. ಇದನ್ನು ಶಾಸಕರೇ ಖುದ್ದಾಗಿ ಬಂದು ನನ್ನ ಜೊತೆ ಹೇಳಿದ್ದಾರೆ’ ಎಂದರು.

‘ಆಮ್ ಆದ್ಮಿ ಪಕ್ಷವು ಬಿಜೆಪಿಗೆ ದೊಡ್ಡ ಸವಾಲಾಗಿದ್ದು, ಹೀಗಾಗಿ ಎಲ್ಲಾ ಕಡೆಗಳಿಂದಲೂ ದಾಳಿ ಎದುರಿಸುತ್ತಿದೆ’ ಎಂದು ದೂರಿದರು.
.ವಿಶ್ವಾಸ ಮತಯಾಚಿಸಲು ಮುಂದಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ .
‘ಒಂದು ವೇಳೆ ಈ ಚುನಾವಣೆಯಲ್ಲಿ (2024ರ ಲೋಕಸಭೆ ಚುನಾವಣೆ) ಬಿಜೆಪಿ ಗೆಲುವು ಸಾಧಿಸಿದರೂ, 2029ರಲ್ಲಿ ಬಿಜೆಪಿಯಿಂದ ದೇಶವನ್ನು ಎಎಪಿ ಮುಕ್ತಿಗೊಳಿಸಲಿದೆ ಎಂದು ಕೇಜ್ರಿವಾಲ್ ನುಡಿದರು.

’ನನ್ನನ್ನು ಬಂಧಿಸುವ ಮೂಲಕ ಎಎಪಿಯನ್ನು ಮುಗಿಸಬಹುದು ಎಂದು ಬಿಜೆಪಿ ತಿಳಿದುಕೊಂಡಿದೆ. ನನ್ನನ್ನು ಬಂಧಿಸಬಹುದು ಆದರೆ ನನ್ನ ಆಲೋಚನೆಗಳನ್ನು ಮುಗಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸೇವಾ ಇಲಾಖೆಗಳನ್ನು ಹಾಗೂ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ನಮ್ಮ ಕೆಲಸಗಳಿಗೆ ತಡೆಯೊಡ್ಡುತ್ತಿದೆ ಎಂದು ಆರೋಪಿಸಿರು.
.ಪ್ರಧಾನಿ ಕುರಿತು ಅವಹೇಳನ: ಕೇಜ್ರಿವಾಲ್, ಸಿಂಗ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್.
ಅವರು ತಮ್ಮನ್ನು ತಾವು ರಾಮ ಭಕ್ತರೆಂದು ಕರೆದುಕೊಳ್ಳುತ್ತಾರೆ. ಆದರೆ ನಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಸಿಗುವ ಔಷಧಗಳನ್ನು ನಿಲ್ಲಿಸಿದ್ದಾರೆ. ಹೀಗೆ ಮಾಡಲು ರಾಮ ಹೇಳಿದ್ದಾನೆಯೇ ಎಂದು ಪ್ರಶ್ನಿಸಿದರು.

ಈ ಹಿಂದೆ ಹಲವು ದಾಳಿಗಳು ನನ್ನ ಮೇಲೆ ನಡೆದವು. ನನ್ನ ಮೇಲೆ ಹಲ್ಲೆ ಮಾಡಿದರು, ಮಸಿ ಎರಚಿದರು, ಈಗ ನನ್ನನ್ನು ಬಂಧಿಸಲು ಸಜ್ಜಾಗಿದ್ದಾರೆ ಎಂದರು.
.ಅಯೋಧ್ಯೆ | ಬಾಲರಾಮನ ದರ್ಶನ ಪಡೆದ ಅರವಿಂದ ಕೇಜ್ರಿವಾಲ್, ಭಗವಂತ ಮಾನ್ ಕುಟುಂಬ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.