ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ಕ್ಷೇತ್ರ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಡಾ.ಸೊನಾಲಿ ಘೋಷ್ ಅಸ್ಸಾಂ ಸರ್ಕಾರದಿಂದ ನೇಮಕಗೊಂಡಿರುವ ನಿರ್ದೇಶಕಿ.

ಸೆಪ್ಟೆಂಬರ್ 1 ರಿಂದ ಇವರು ಅಧಿಕಾರವಹಿಸಿಕೊಳ್ಳಲಿದ್ದಾರೆ.

ಇವರು ನಾಗಾಂವ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್, ಸೋನಿತ್‌ಪುರ ಮತ್ತು ಬಿಸ್ವನಾಥ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಹಾಲಿ ನಿರ್ದೇಶಕರಾಗಿರುವ ಜತೀಂದ್ರ ಶರ್ಮಾ ಅವರು ಆಗಸ್ಟ್ 31ರಂದು ನಿವೃತ್ತಿ ಹೊಂದಲಿದ್ದಾರೆ. ಸೆ.1 ರಿಂದ ಸೋನಾಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಅರಣ್ಯಕ್ಕೆ ಮೊದಲ ಮಹಿಳಾ ನಿರ್ದೇಶಕಿಯಾಗಿ ಅಧಿಕಾರವಹಿಸಿಕೊಳ್ಳುತ್ತಿರುವ ಖ್ಯಾತಿ ಸೊನಾಲಿ ಅವರಿಗೆ ಸಲ್ಲುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸೊನಾಲಿ ಅವರು ಇಂಡೋ-ಭೂತಾನ್ ಮಾನಸ್ ಭೂಭಾಗಗಳಲ್ಲಿ ಹುಲಿಗಳಿಗೆ ಆವಾಸಸ್ಥಾನದ ಸೂಕ್ತತೆಗೆ ಸಂಬಂಧಿಸಿದಂತೆ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.