ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.

ಪಂಜಾಬ್ನಲ್ಲಿ ಅತಂತ್ರ ವಿಧಾನಸಭೆ ಪರಿಸ್ಥಿತಿ ಏರ್ಪಡಲಿದ್ದು, ಆಮ್ ಆದ್ಮಿ ಪಾರ್ಟಿ (ಎಎಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ.

ಎಎಪಿ ಪಂಜಾಬ್, ಗೋವಾ ಹಾಗೂ ಉತ್ತರಾಖಂಡದಲ್ಲಿ ಪ್ರಮುಖ ಎದುರಾಳಿ ಅಥವಾ ಹತ್ತಿರದ ಮೂರನೇ ಪಕ್ಷವಾಗಿ ಹೊರಹೊಮ್ಮುತ್ತಿದೆ. ಪಂಜಾಬ್ ಮತ್ತು ಮಣಿಪುರ ಸೇರಿ ಹಲವು ರಾಜ್ಯಗಳಲ್ಲಿತೀವ್ರ ಒಳ ಜಗಳಕ್ಕೆ ಸಾಕ್ಷಿಯಾಗಿರುವ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಲಿದೆ ಎಂದು ಕಳೆದ ತಿಂಗಳು ನಡೆದ ಎಬಿಪಿ-ಸಿವೋಟರ್ ಮತದಾರರ ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಶೇಕಡಾ .41.3 ರಷ್ಟು ಮತ ಪಡೆಯಬಹುದು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಶೇಕಡಾ.32, ಬಹುಜನ ಸಮಾಜ ಪಕ್ಷಕ್ಕೆ ಶೇಕಡಾ 15, ಕಾಂಗ್ರೆಸ್ಗೆ ಶೇಕಡಾ 6 ಮತ್ತು ಇತರೆ ಪಕ್ಷಗಳು ಶೇಕಡಾ 6 ರಷ್ಟು ಮತ ಸಿಗಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಆಢಳಿತಾರೂಢ ಬಿಜೆಪಿ ಪಕ್ಷವು ರಾಜ್ಯದಲ್ಲಿ ಶೇಕಡಾ 41.4 ರಷ್ಟು ಮತಗಳನ್ನು ಗಳಿಸಿತ್ತು. ಅದನ್ನೇ ಈ ಬಾರಿಯೂ ಮುಂದುವರಿಸಲಿದೆ ಎನ್ನುತ್ತೆ ಸಮೀಕ್ಷೆ

ಸೀಟುಗಳ ವಿಷಯದಲ್ಲಿ, ಸಮೀಕ್ಷೆಯ ಪ್ರಕಾರ, ಬಿಜೆಪಿ 241 ರಿಂದ 249 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಸಮಾಜವಾದಿ ಪಕ್ಷದ ಪಾಲು 130 ರಿಂದ 138 ಸ್ಥಾನಗಳಾಗಿರಬಹುದು.ಮಾಯಾವತಿಯವರ ಬಿಎಸ್ಪಿ 15 ರಿಂದ 19 ಮತ್ತು ಕಾಂಗ್ರೆಸ್ 3 ರಿಂದ 7 ಸ್ಥಾನಗಳನ್ನು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.