ನವದೆಹಲಿ: ನರೇಂದ್ರಮೋದಿ ಧರಿಸಿದ ಶಾಲು,ಟರ್ಬನ್, ಉಡುಗೊರೆಗಳನ್ನು ಹರಾಜಿಗಿಡಲು ಸರ್ಕಾರತೀರ್ಮಾನಿಸಿದ್ದು, ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್ಜಿಎಂಎ)ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ದೇಶದ ವಿವಿಧ ಸಂಸ್ಥೆಗಳು, ವ್ಯಕ್ತಿಗಳು ಮೋದಿಗೆ ನೀಡಿದ ಉಡುಗೊರೆಗಳನ್ನು ಹರಾಜು ಮಾಡಲು ತೀರ್ಮಾನಿಸಲಾಗಿದೆ. ಹರಾಜು ಈ ತಿಂಗಳಲ್ಲೇ ನಡೆಯಲಿದ್ದು ದಿನಾಂಕ ನಿಗದಿ ಆಗಿಲ್ಲ.ಮುಂದಿನ 10- 15 ದಿನಗಳಲ್ಲಿ ಹರಾಜು ನಡೆಯಲಿದೆ. ಹರಾಜು ಮೂಲಕ ಸಿಕ್ಕಿದ ಹಣವನ್ನು ಉತ್ತಮ ಕೆಲಸಕ್ಕೆ ಬಳಸಲಾಗುವುದು ಎಂದು ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ:ಮೋದಿ ಸರ್ಕಾರದ ಸಾಲದ ಹೊರೆ₹82 ಲಕ್ಷ ಕೋಟಿ!

ಗಂಗಾ ನದಿ ಸಂರಕ್ಷಣೆಗಾಗಿರುವ ನಮಾಮಿ ಗಂಗೆ ಕಾರ್ಯಕ್ಕೆ ಈ ಹಣವನ್ನು ಬಳಸಲಾಗುವುದು ಕೇಂದ್ರ ಸರ್ಕಾರ ಹೇಳಿದೆ.

ಮೋದಿಯವರೆಗೆ ಉಡುಗೊರೆಯಾಗಿ ಸಿಕ್ಕಿದ ಪೇಟಿಂಗ್, ಫೋಟೊ, ಟರ್ಬನ್ (ಪೇಟಗಳು), ಶಾಲುಗಳು, ಶಿಲ್ಪಗಳು ಸೇರಿದಂತೆ 1,800 ವಸ್ತುಗಳನ್ನು ಹರಾಜು ಮಾಡಲಾಗುವುದು. ಮೂರು ದಿನ ಇ-ಸೇಲ್ ಇರಲಿದ್ದು, ಇದಾದನಂತರ 2 ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎನ್ಜಿಎಂಎನಲ್ಲಿ ಮೋದಿಗೆ ಸಿಕ್ಕಿದ ಉಡುಗೊರೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

2015ರಲ್ಲಿ ಗುಜರಾತಿನಲ್ಲಿ ಇದೇ ರೀತಿ ಹರಾಜು ನಡೆಸಿ ಅದರಲ್ಲಿ ಸಿಕ್ಕಿದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗಿತ್ತು.

ವಸ್ತುಗಳ ಆರಂಭಿಕ ಬೆಲೆ ₹500. ಉಡುಗೊರೆಗಳನ್ನು ಹರಾಜು ಮಾಹಿತಿ ಇರುವವೆಬ್ಸೈಟ್ ಶೀಘ್ರದಲ್ಲೇ ಲೈವ್ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.