ಅಯೋಧ್ಯೆ: ಹರಿದ್ವಾರ ಕುಂಭ ಮೇಳದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಸಾಧು ಸಂತರ ಹೆಚ್ಚಾಗುತ್ತಿದ್ದು, ಕೋವಿಡ್ 19 ಸೋಂಕು ಹರಡುವಿಕೆ ತಡೆಗೆ ಅಲ್ಲಿನ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.

ರಾಮ ನವಮಿ ಸಂದರ್ಭದಲ್ಲಿ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.

ಹೀಗಾಗಿ ಭೇಟಿ ನೀಡುವವರು 48 ಗಂಟೆಗಳ ಅವಧಿಯಲ್ಲಿ ಪಡೆದಿರುವ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಕಡ್ಡಾಯ ಹೊಂದಿರುವ ಕ್ರಮ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಎ ಕೆ ಝಾ ತಿಳಿಸಿದ್ದಾರೆ.

ಸಂಪ್ರದಾಯದ ಪ್ರಕಾರ, ರಾಮನವಮಿ ಆಚರಣೆಗೆ ದೇಶದ ಎಲ್ಲ ಸಾಧು ಸಂತರು ಪ್ರತಿವರ್ಷ ಅಯೋಧ್ಯೆಗೆ ಭೇಟಿ ನೀಡುವ ಪರಿಪಾಠವಿದೆ. ಹೀಗಾಗಿ ಹೆಚ್ಚಿನ ಜನರ ಸೇರುವಿಕೆಯಿಂದ ಕೋವಿಡ್ 19 ಸೋಂಕು ಹರಡುವಿಕೆ ಅಪಾಯ ಇರುವುದರಿಂದ ಅದನ್ನು ತಡೆಯಲು ಸೂಕ್ತ ಕ್ರಮಕ್ಕೆ ಆಡಳಿತ ಯೋಚಿಸುತ್ತಿದೆ.

ಕುಂಭ ಮೇಳ: ಒಂದು ಸಾವಿರಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ

ಏಪ್ರಿಲ್ 21ರಂದು ಅಯೋಧ್ಯೆಗೆ ರಾಮನವಮಿ ಆಚರಿಸಲು ಧರ್ಮಗುರುಗಳು ಮತ್ತು ಭಕ್ತರು ತೆರಳಲಿದ್ದಾರೆ. ಹರಿದ್ವಾರ ಕುಂಭಮೇಳದಲ್ಲಿ ಭಾಗವಹಿಸಿದ್ದವರ ಪೈಕಿ 1,700ಕ್ಕೂ ಅಧಿಕ ಭಕ್ತರು ಮತ್ತು ಸಂತರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಕುಂಭ ಮೇಳದಲ್ಲಿ ಭಾಗವಹಿಸಿದ್ದ 1,701 ಮಂದಿಗೆ ಕೋವಿಡ್ ಪಾಸಿಟಿವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.