ಶ್ರೀನಗರ: ‘ಸರ್ವಾಧಿಕಾರ ಧೋರಣೆ ಹೆಚ್ಚು ಕಾಲ ಉಳಿಯುವುದಿಲ್ಲ. ಬಾಂಗ್ಲಾದೇಶದಲ್ಲಿ ಉಂಟಾದ ಅರಾಜಕತೆ ಭಾರತಕ್ಕೂ ಪಾಠವಿದ್ದಂತೆ’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಉತ್ತಮ ಶಿಕ್ಷಣ ಪಡೆದ ಮೇಲೂ ಯುವಕರು ಉದ್ಯೋಗ ಅವಕಾಶ ವಂಚಿತರಾಗುವುದು ಅವರಲ್ಲಿ ಅಸಹಾಯಕತೆಗೆ ಕಾರಣವಾಗಬಹುದು. ಇದರಿಂದ ದೇಶದಲ್ಲಿಯೂ ಬಾಂಗ್ಲಾದೇಶದಂತಹ ಪರಿಸ್ಥಿತಿ ಉದ್ಭವಿಸಬಹುದು. ಸರ್ವಾಧಿಕಾರ ಧೋರಣೆ ಹೆಚ್ಚು ಕಾಲ ಉಳಿಯುವುದಿಲ್ಲ. ಇದು ಭಾರತಕ್ಕೂ ಪಾಠವಾಗಿದೆ’ ಎಂದು ಹೇಳಿದ್ದಾರೆ.
.Bangla Unrest: ಹಸೀನಾ ವಿರುದ್ಧ ಸಾವನ್ನೂ ಲೆಕ್ಕಿಸದ ವಿದ್ಯಾರ್ಥಿಗಳ ಆಕ್ರೋಶ ಏಕೆ?.ಬಾಂಗ್ಲಾದಲ್ಲಿ ಬಿಕ್ಕಟ್ಟು l PM ಹಸೀನಾ ರಾಜೀನಾಮೆ: ಸೇನೆಯಿಂದ ಮಧ್ಯಂತರ ಸರ್ಕಾರ.ಕರ್ನಾಟಕ, ಹಿಮಾಚಲ ಪ್ರದೇಶ, ಅಸ್ಸಾಂಗೆ ಅತಿ ಹೆಚ್ಚು ನೆರೆ ಪರಿಹಾರ: ಕೇಂದ್ರ ಸರ್ಕಾರ.Vinesh Disqualified | ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚನೆ: ಕೇಂದ್ರ ಸಚಿವ.
‘ಜನ ವಿರೋಧಿ ನೀತಿಗಳು ಹಾಗೂ ಕಾನೂನುಗಳಿಗೆ ಬೇಸತ್ತು, ಜನರು ತಮ್ಮ ತಾಳ್ಮೆ ಕಳೆದುಕೊಂಡು ತಿರುಗಿ ಬಿದ್ದರೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಪಲಾಯನ ಮಾಡಿದ ರೀತಿಯೇ ಮಾಡಬೇಕಾಗುತ್ತದೆ. ಹೀಗಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಸರ್ಕಾರ ಗಮನಹರಿಸಬೇಕು. ಅಂತಹ ಪರಿಸ್ಥಿತಿಗಳು ದೇಶದಲ್ಲಿ ಉದ್ಭವಿಸಬಾರದು’ ಎಂದೂ ತಿಳಿಸಿದ್ದಾರೆ.

ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸುಮಾರು 440 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರು ಢಾಕಾದಲ್ಲಿರುವ ಪ್ರಧಾನಿ ತಂಗುವ ಅರಮನೆಗೆ ನುಗ್ಗಿದ್ದರು. ದೇಶದಲ್ಲಿ ಉಂಟಾದ ಅರಾಜಕತೆಗೆ ನಲುಗಿದ ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದರು.
.Vinesh Disqualified | ವಿನೇಶಾ ಪರ ಸ್ಫೂರ್ತಿದಾಯಕ ಸಂದೇಶ ಹಂಚಿದ ಸಿದ್ಧರಾಮಯ್ಯ.ಪ್ಯಾರಿಸ್ ಒಲಿಂಪಿಕ್ಸ್: ಕುಸ್ತಿ ಫೈನಲ್ ಪಂದ್ಯಕ್ಕೆ ವಿನೇಶಾ ಫೋಗಟ್ ಅನರ್ಹ!.
ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.