ನವದೆಹಲಿ: ₹1,392 ಕೋಟಿ ಮೊತ್ತದ ಬ್ಯಾಂಕ್ ಸಾಲ ವಂಚನೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ, ಹರಿಯಾಣ ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್, ಮೆಟಲ್ ಫ್ಯಾಬ್ರಿಕೇಟಿಂಗ್ ಕಂಪನಿ ಮತ್ತು ಅದರ ಪ್ರವರ್ತಕರಿಗೆ ಸಂಬಂಧಿಸಿದ ಜಾಗಗಳಲ್ಲಿ ಶೋಧ ನಡೆಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಹೇಂದ್ರಗಢ, ಬಹಾದುರ್ಗಢ ಮತ್ತು ಹರಿಯಾಣದ ಗುರುಗ್ರಾಮ, ದೆಹಲಿಯ ಜೆಮ್ಶೆಡ್ಪುರ ಸೇರಿದಂತೆ 15 ಕಡೆಗಳಲ್ಲಿ ಶೋಧ ನಡೆಸಿತು. ಮಹೇಂದ್ರಗಢ ಕ್ಷೇತ್ರದ ಶಾಸಕ ರಾವ್ ದಾನ್ ಸಿಂಗ್ ಮತ್ತು ಅವರ ಪುತ್ರ ಅಕ್ಷತ್ ಸಿಂಗ್ ಅವರಿಗೆ ಸಂಬಂಧಿಸಿದ ಸ್ಥಳಗಳು, ಅಲೈಡ್ ಸ್ಟ್ರಿಪ್ಸ್ ಲಿಮಿಟೆಡ್ (ಎಎಸ್ಎಲ್) ಕಂಪನಿಯಲ್ಲೂ ಕಾರ್ಯಾಚರಣೆ ನಡೆಸಿತು.

ಎಎಸ್ಎಲ್ ಕಂಪನಿ ಮೇಲೆ ₹1,392 ಕೋಟಿ ಮೊತ್ತದ ಬ್ಯಾಂಕ್ ಸಾಲ ವಂಚನೆ ಆರೋಪ ಇದ್ದು, 2022ರಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.