ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ವಿ.ವಿ ಹಿಂದೂ ಅಧ್ಯಯನ ಕೇಂದ್ರದಲ್ಲಿ ಭಗವದ್ಗೀತೆ ಪಠ್ಯ?

Published : 8 ಜುಲೈ 2024, 13:48 IST
Last Updated : 8 ಜುಲೈ 2024, 13:48 IST
ಫಾಲೋ ಮಾಡಿ
Comments

ಪಿಟಿಐ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೈದಿಕ ಶಿಕ್ಷಣ, ಉಪನಿಷತ್‌, ಧರ್ಮ ಇತ್ಯಾದಿ ವಿಷಯಗಳನ್ನು ಪರಿಚಯಿಸಲು ಸಿದ್ಧತೆ ನಡೆದಿದೆ.

ಪಠ್ಯಕ್ರಮವನ್ನು ವಿಸ್ತರಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗೆ ಅವಕಾಶ ನೀಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ. ನೂತನ ಪಠ್ಯಕ್ರಮವನ್ನು ಪರಿಚಯಿಸುವ ಪ್ರಸ್ತಾವವನ್ನು ವಿಶ್ವವಿದ್ಯಾಲಯದ ಅಕಾಡೆಮಿಕ್‌ ಕೌನ್ಸಿಲ್‌ ಮುಂದಿಡಲಾಗಿದೆ.

ಕೌನ್ಸಿಲ್‌ ಸಭೆ ಜುಲೈ 12ಕ್ಕೆ ನಿಗದಿಲಾಗಿದೆ. ಭಗವದ್ಗೀತೆ, ಹಿಂದೂ ಚಿಂತಕರು ಮತ್ತು ಪುರಾಣಗಳ ಪರಿಚಯ ವಿಷಯಗಳನ್ನು ಪಠ್ಯಕ್ರಮವು ಒಳಗೊಂಡಿದೆ. ಹಿಂದೂ ಅಧ್ಯಯನ ಕೇಂದ್ರದ ಶಿಫಾರಸು ಆಧಾರಿಸಿ ಈ ಪ್ರಸ್ತಾವವನ್ನು ಮುಂದಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT