ನವದೆಹಲಿ: ಭಾರತವು 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಲ್ಲದೆ ಒಗ್ಗಾಟಾಗಿರುವ ಮೂಲಕ ಪ್ರಪಂಚದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಿ ಎಂದು ಕರೆ ನೀಡಿದ್ದಾರೆ.

ಆರ್ಎಸ್ಎಸ್ನ ಹಿರಿಯ ನಾಯಕ ರಂಗ ಹರಿಯವರ ‘ಪೃಥ್ವಿ ಸೂಕ್ತ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜನರು ತಮ್ಮ ತಾಯ್ನಾಡಿನ ಬಗ್ಗೆ ಭಕ್ತಿ, ಪ್ರೀತಿ ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು” ಎಂದು ಮನವಿ ಮಾಡಿದ ಅವರು, ನಾವು ಮಾತೃಭೂಮಿಯನ್ನು ನಮ್ಮ ರಾಷ್ಟ್ರೀಯ ಏಕತೆಯ ಅತ್ಯಗತ್ಯ ಅಂಶವೆಂದು ಪರಿಗಣಿಸುತ್ತೇವೆ ಎಂದು ನುಡಿದರು.

‘ನಮ್ಮ 5 ಸಾವಿರ ವರ್ಷಗಳ ಹಳೆಯ ಸಂಸ್ಕೃತಿ ಜಾತ್ಯತೀತವಾಗಿದೆ. ಎಲ್ಲಾ ತತ್ವಜ್ಞಾನಗಳಲ್ಲಿ ಕೂಡ ಇದೆ ತೀರ್ಮಾನವಾಗಿದೆ. ಇಡೀ ವಿಶ್ವವೇ ಒಂದು ಜಗತ್ತು ಎನ್ನುವುದೇ ನಮ್ಮ ಭಾವನೆಯಾಗಿದೆ. ಇದು ಸಿದ್ಧಾಂತವಲ್ಲ. ಅದನ್ನು ತಿಳಿದುಕೊಳ್ಳಿ, ಅರಿತುಕೊಳ್ಳಿ ಮತ್ತು ಅದರಂತೆ ವರ್ತಿಸಿ ಎಂದು ಹೇಳಿದ್ದಾರೆ.

ದೇಶ ವೈವಿಧ್ಯತೆಯಿಂದ ಕೂಡಿದೆ. ಯಾರೊಂದಿಗೂ ಜಗಳವಾಡಬೇಡಿ. ನಾವೆಲ್ಲಾ ಒಂದು ಎಂದು ಇಡೀ ಜಗತ್ತಿಗೆ ತಿಳಿಸುವಂತೆ ನಮ್ಮ ದೇಶಕ್ಕೆ ಶಕ್ತಿ ತುಂಬಿ ಎಂದು ಹೇಳಿದ್ದಾರೆ.

ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ಭಾರತವನ್ನು ರಚಿಸಿದ್ದಾರೆ. ಅವರು ತಮ್ಮ ಜ್ಞಾನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ಹಸ್ತಾಂತರಿಸುವ ಸಮಾಜವನ್ನು ಸೃಷ್ಟಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.